Connect with us

BANTWAL

ಕೇಂದ್ರದ ಹಾದಿಯಲ್ಲಿ ರಾಜ್ಯ ಸರ್ಕಾರ : ರಾಷ್ಟ್ರೀಯ ಹೆದ್ದಾರಿ ಆಯ್ತು ಇನ್ಮುಂದೆ ರಾಜ್ಯ ಹೆದ್ದಾರಿಗಳಲ್ಲಿಯೂ ಲೂಟಿ..!!?

ವಿಶೇಷ ವರದಿ:

ಮಂಗಳೂರು : ಕೇಂದ್ರದ ಹಾದಿಯಲ್ಲೇ ಇದೀಗ ರಾಜ್ಯ ಸರ್ಕಾರ ಕೂಡ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಒಂದೆಡೆ ಮಧ್ಯಮ ಹಾಗೂ ಬಡ ಜನತೆ ಕೊರೊನಾದಿಂದ ಕೈಯಲ್ಲಿ ದುಡ್ಡಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲೇ ಗಾಯದ ಮೇಲೆ ಬರೆ ಎಳೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಇನ್ಮುಂದೆ ರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣ ಮಾಡಬೇಕೆಂದರೂ ಸಹ ಹಳ್ಳಿಗಳಿಂದ ನಗರ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟೋಲ್ ಬೂತ್‌ಗಳು ಎದುರಾಗಲಿವೆ.

ಈ ಮೂಲಕ ಹಳ್ಳಿಗಾಡುಗಳಲ್ಲಿಯೂ ರಾಜ್ಯ ಹೆದ್ದಾರಿ ಬಳಕೆ ಮಾಡುವ ವಾಹನ ಸವಾರರಿಗೆ ಟೋಲ್ ಶುಲ್ಕದ ಬಿಸಿ ತಟ್ಟಲಿದೆ. 100 ರ ಆಸುಪಾಸಿನಲ್ಲಿ ಡಿಸೇಲ್- ಪೆಟ್ರೋಲ್ ದರ ತಂದಿರಿಸಿದ್ದ ಸರ್ಕಾರ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಸ್ಥಳಿಯ ಹೆದ್ದಾರಿಗಳಿಗೆ ಟೋಲ್ ವಿಧಿಸಲು ಮುಂದಾಗಿದೆ.

ಸರ್ಕಾರ ಈ ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕರಾವಳಿ ಜಿಲ್ಲೆ ಉಡುಪಿ ಪಡುಬಿದ್ರೆ – ಕಾರ್ಕಳದ ರಸ್ತೆಗೂ ಈ ಹಿಂದೆ ಟೋಲ್ ವಿಧಿಸಲು ಮುಂದಾಗಿತ್ತು.

ಆದರೆ ಸ್ಥಳೀಯರ ತೀವ್ರ ವಿರೋಧ ಮತ್ತು ಹೋರಾಟಕ್ಕೆ ಮಣಿದು ಟೋಲ್ ಸಂಗ್ರಹದಿಂದ ಹಿಂದೆ ಸರಿದಿತ್ತು, ಇದೀಗ ಮತ್ತೆ ಇದೇ ಮಾದರಿಯ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಉಡುಪಿ ಜಿಲ್ಲೆ ರಸ್ತೆಗಳಿಗೆ ಸರ್ಕಾರ ಟೋಲ್ ವಿಧಿಸಲು ಯೋಜನೆ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ,

ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ-ಮುಡಿಪು-ಮೆಲ್ಕಾರ್ ರಸ್ತೆ, ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಡಿ ,ಬಂಟ್ವಾಳದ ಮಾಣಿ – ಪುತ್ತೂರು- ಸುಳ್ಯ ಹೆದ್ದಾರಿಗಳು ಇನ್ನು ಮುಂದೆ ಟೋಲ್ ರಸ್ತೆಗಳಾಗಿ ಮಾರ್ಪಾಡುಗೊಳ್ಳಲಿದ್ದು ಈ ರಸ್ತೆಗಳಲ್ಲಿ ಚಲಿಸುವ ವಾಹನಗಳು ಹೆದ್ದಾರಿ ಶುಲ್ಕ ಪಾವತಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಮಂಗಳೂರು ಬಜ್ಪೆ ಕಟೀಲ್- ಕಿನ್ನಿಗೋಳಿರಸ್ತೆಯೂ ಟೋಲ್ ರಸ್ತೆಯಾಗಿ ಮಾರ್ಪಾಡುಗೊಳ್ಳಲಿದ್ದು, ಜನರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ.

ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಬೇಕಂದರೂ ಸಹ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಗಳಲ್ಲಿ ಕಡ್ಡಾಯ ಫಾಸ್ಟ್ಯಾಗ್ ಬಳಕೆಯ ನಿಯಮ ಹೆದ್ದಾರಿ ಬಳಕೆದಾರರಿಗೆ ತಲೆ ಬಿಸಿಯಾಗಿತ್ತು,

ಆದ್ರೆ ಇನ್ಮುಂದೆ ರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣ ಮಾಡಬೇಕೆಂದರೂ ಸಹ ಹಳ್ಳಿಗಳಿಂದ ನಗರ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟೋಲ್ ಬೂತ್‌ಗಳು ಎದುರಾಗಲಿವೆ.

ಈ ಮೂಲಕ ಹಳ್ಳಿಗಾಡುಗಳಲ್ಲಿಯೂ ರಾಜ್ಯ ಹೆದ್ದಾರಿ ಬಳಕೆ ಮಾಡುವ ವಾಹನ ಸವಾರರಿಗೆ ಟೋಲ್ ಶುಲ್ಕದ ಬಿಸಿ ತಟ್ಟಲಿದೆ.

ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯವರು ಈಗಾಗಲೆ ಹೆಸರಾಂತ ಕಂಪನಿಗಳಿಂದ ಬಿಡ್ ಆಹ್ವಾನಿಸಿದ್ದಾರೆ. ರಾಜ್ಯ ಸರ್ಕಾರಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನಡುವೆಯೂ ಈ ರೀತಿಯ ಶುಲ್ಕ ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೇ ವಾಹನ ಖರೀದಿಸುವಾಗ ರೋಡ್ ಟ್ಯಾಕ್ಸ್ ಸೇರಿದಂತೆ ಪೆಟ್ರೋಲ್ ಡೀಸೇಲ್‌ ಹಾಕಿಸಿಕೊಳ್ಳುವಾಗಲು ಸೆ‌ಸ್ ರೂಪದಲ್ಲಿ‌ ಸುಂಕ ಕಟ್ಟುತ್ತೇವೆ.

ಆದ್ರೆ ಈಗ ಹಳ್ಳಿ ಹಳ್ಳಿಗಳಲ್ಲಿಯೂ ಸುಂಕ ವಸೂಲಾತಿ ಕೇಂದ್ರ ಸ್ಥಾಪಾನೆ ಮಾಡಲು ಯೋಜನೆ ರೂಪಿಸಿದ್ದು ಸರ್ಕಾರ ಸಾರ್ವಜನಿಕರ ಸ್ಥಿತಿಗತಿಗಳನ್ನ ಅರಿತುಕೊಂಡು ಕೂಡಲೇ ಈ ಯೋಜನೆ ಕೈ ಬಿಡಬೇಕೆಂದು ಸಾರ್ವಜನಿರು ಮನವಿ ಮಾಡಿದ್ದಾರೆ.