KARNATAKA
ಮುಂದಿನ ಆರು ತಿಂಗಳಲ್ಲಿ ಹಳಿಗಿಳಿಯಲಿದೆ ಬಹುನಿರೀಕ್ಷಿತ ‘ವಂದೇ ಭಾರತ್ ಸ್ಲೀಪರ್ ಕೋಚ್’ ರೈಲು..!
ಆರಾಮದಾಯಕವಾಗಿ ರೈಲುಗಳಲ್ಲಿ ಪ್ರಯಾಣಿಸುವವರಿಗೆ ವಂದೇ ಭಾರತ್ ರೈಲುಗಳು ಒಂದು ವರದಾನವಾಗಿವೆ. ಇದಕ್ಕೆ ಮತ್ತೊಂದು ಗರಿಯಾಗಿ ಸೇರ್ಪಡೆಗೊಳ್ಳಲು ಸಜ್ಜಾಗಿದೆ ಸ್ಲೀಪರ್ ಕೋಚ್‌ಗಳು. ಇನ್ನು ಕೆಲವೇ ದಿನಗಳಲ್ಲಿ ಸ್ಲೀಪರ್ ಕೋಚ್ ಗಳುಳ್ಳ ವಂದೇ ಭಾರತ್ ರೈಲುಗಳು ಭಾರತೀಯ ಹಳಿಗಳಿಗೆ ಇಳಿಯಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ಹುಬ್ಬಳ್ಳಿ : ಸ್ವದೇಶಿ ನಿರ್ಮಿತ ವಂದೇ ಭಾರತ್ ರೈಲುಗಳು ಈಗಾಗಲೇ ದೇಶದ ಜನರ ಗಮನ ಸೆಳೆದು ಸಂಚಲನ ಮೂಡಿಸಿವೆ. ಈ ರೈಲುಗಳ ತ್ವರಿತ ಸಂಚಾರ, ಅವುಗಳೊಳಗಿನ ಸೌಕರ್ಯಗಳಿಗೆ ಪ್ರಯಾಣಿಕರು ಮಾರು ಹೋಗಿದ್ದಾರೆ. ದೂರದೂರುಗಳಿಗೆ ಆರಾಮದಾಯಕವಾಗಿ ರೈಲುಗಳಲ್ಲಿ ಪ್ರಯಾಣಿಸುವವರಿಗೆ ವಂದೇ ಭಾರತ್ ರೈಲುಗಳು ಒಂದು ವರದಾನವಾಗಿವೆ.
ಇದಕ್ಕೆ ಮತ್ತೊಂದು ಗರಿಯಾಗಿ ಸೇರ್ಪಡೆಗೊಳ್ಳಲು ಸಜ್ಜಾಗಿದೆ ಸ್ಲೀಪರ್ ಕೋಚ್‌ಗಳು. ಇನ್ನು ಕೆಲವೇ ದಿನಗಳಲ್ಲಿ ಸ್ಲೀಪರ್ ಕೋಚ್ ಗಳುಳ್ಳ ವಂದೇ ಭಾರತ್ ರೈಲುಗಳು ಭಾರತೀಯ ಹಳಿಗಳಿಗೆ ಇಳಿಯಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾರತ್ ಅರ್ತ್ ಮೂವರ್ಸ್ ಕಂಪನಿಯು ತಯಾರಿಸಿರುವ ವಂದೇ ಭಾರತ್ ಸ್ಲೀಪರ್ ರೈಲಿನ ಬೋಗಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದ್ದಾರೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ‘ವಂದೇ ಭಾರತ್ ಸ್ಲೀಪರ್’ ರೈಲು ಆರು ತಿಂಗಳಲ್ಲಿ ಸಂಚಾರ ಆರಂಭಿಸಲಿದೆ. ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ಗೆ (ಬಿಇಎಂಎಲ್) ಶನಿವಾರ ಭೇಟಿ ನೀಡಿ, ‘ವಂದೇ ಭಾರತ್ ಸ್ಲೀಪರ್ ರೈಲಿನ’ ಬೋಗಿಯನ್ನು (ನಿರ್ಮಾಣ ಹಂತದ ಒಳವಿನ್ಯಾಸ) ಅನಾವರಣಗೊಳಿಸಿ ಮಾತನಾಡಿದರು.”ವಂದೇ ಭಾರತ್ ಸರಣಿಯ ಸ್ಲೀಪರ್ ರೈಲು ಶೀಘ್ರವೇ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಈ ರೈಲುಗಳನ್ನು ನಾಲ್ಕರಿಂದ ಆರು ತಿಂಗಳ ಕಾಲ ನಾನಾ ಬಗೆಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಬಳಿಕ ಅಗತ್ಯ ಬದಲಾವಣೆಯೊಂದಿಗೆ ಇನ್ನಷ್ಟು ರೈಲುಗಳನ್ನು ನಿರ್ಮಾಣ ಮಾಡಲಾಗುವುದು” ಎಂದರು.
ವಂದೇ ಭಾರತ್ ಸ್ಲೀಪರ್ ಕೋಚ್ ಗಳಲ್ಲಿ ಏನು ವಿಶೇಷತೆ..!?
* ‘ವಂದೇ ಭಾರತ್‌ಗಿಂತಲೂ ವಿಶೇಷ ಸೌಲಭ್ಯಗಳನ್ನು ಸ್ಲೀಪರ್ ರೈಲು ಹೊಂದಿರಲಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಸನಗಳ ಎತ್ತರ ವಿನ್ಯಾಸ ಮಾಡಲಾಗಿದೆ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಇರಲಿದೆ. ಕಡಿಮೆ ಕಂಪನ ವ್ಯವಸ್ಥೆ ಇರುವುದರಿಂದ ಜನ ಆರಾಮವಾಗಿ ನಿದ್ರಿಸಿ ಪ್ರಯಾಣಿಸಬಹುದು
* ‘ಅಗ್ನಿ ಅವಘಡ ನಿಯಂತ್ರಣ ಸೇರಿದಂತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಳ ಬಾಗಿಲುಗಳಿಗೆ ಸೆನ್ಸಾರ್ ಅಳವಡಿಕೆ, ದುರ್ವಾಸನೆ ಮುಕ್ತ ಶೌಚಾಲಯ, ಮೊದಲ ದರ್ಜೆ ಎಸಿ ಕಾರ್‌ನಲ್ಲಿಬಿಸಿ ನೀರಿನ ವ್ಯವಸ್ಥೆ, ಯುಎಸ್‌ಬಿ ಚಾರ್ಜಿಂಗ್, ದೃಶ್ಯ ಮಾಹಿತಿ ಸೌಲಭ್ಯ ಇರಲಿದೆ’ .
* ವಂದೇ ಭಾರತ್ ಸ್ಲೀಪರ್ 16 ಬೋಗಿಯನ್ನು ಒಳಗೊಂಡಿದೆ. ಒಂದು ಬೋಗಿಯಲ್ಲಿಕನಿಷ್ಠ 67 ಜನ ಪ್ರಯಾಣಿಸಬಹುದು. ಎಸಿ 3 ಟೈರ್ ಬರ್ತ್‌ನ ಲ್ಲಿ 11 ಬೋಗಿ, 611ಆಸನಗಳು ಇರಲಿವೆ. ಎಸಿ 2 ಟೈರ್ ಬರ್ತ್ ನಲ್ಲಿ 4 ಬೋಗಿ, 188 ಆಸನಗಳಿರಲಿವೆ. ಮೊದಲ ದರ್ಜೆ ಎಸಿ ಬರ್ತ್‌ನಲ್ಲಿ 1 ಬೋಗಿ 24 ಆಸನ ಇರಲಿದೆ.
ವಂದೇ ಭಾರತ್ ಸ್ಲೀಪರ್ ವಿಶೇಷತೆ:
* ಆಸ್ಟೆನಿಟಿಕ್ ಸ್ಟೇನ್ಲೆಸ್ ಸ್ಟೀಲ್ ಕಾರ್ ಬಾಡಿ
* ಜಿಎಫ್‌ಆರ್‌ಪಿ ಪ್ಯಾನಲ್‌ಗಳೊಂದಿಗೆ ಅತ್ಯುತ್ತಮ ದರ್ಜೆಯ ಒಳಾಂಗಣ
* ವಿಶೇಷಚೇತನರಿಗೆ ವಿಶೇಷ ಬರ್ತ್ ಮತ್ತು ಶೌಚಾಲಯಗಳು
* ಸ್ವಯಂಚಾಲಿತ ಬಾಗಿಲುಗಳು
* ಸೆನ್ಸರ್ ಆಧಾರಿತ ಅಂತರ ಸಂವಹನ ಬಾಗಿಲುಗಳು
* ದುರ್ನಾತ ಮುಕ್ತ ಶೌಚಾಲಯ ವ್ಯವಸ್ಥೆ
* 1ನೇ ದರ್ಜೆ ಎಸಿ ಕಾರಿನಲ್ಲಿ ಬಿಸಿ ನೀರಿನ ವ್ಯವಸ್ಥೆ
* ಯುಎಸ್‌ಬಿ ಚಾರ್ಜಿಂಗ್ ನಿಬಂಧನೆಯೊಂದಿಗೆ ಇಂಟಿಗ್ರೇಟೆಡ್ ರೀಡಿಂಗ್ ಲೈಟ್
* ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ
ಬೆಂಗಳೂರಿನ ಭಾರತ್ ಅರ್ತ್ ಮೂವರ್ಸ್ ಕಂಪನಿ ಬಿಇಎಂಎಲ್ 10 ರೈಲುಗಳನ್ನು ಒಟ್ಟು 160 ಬೋಗಿ ನಿರ್ಮಿಸಿ ಕೊಡಲಿದೆ. ‘ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಈ ರೈಲು ಕಡಿಮೆ ವೆಚ್ಚದಲ್ಲಿನಿರ್ಮಾಣ ಆಗುತ್ತಿದೆ. ನಮ್ಮಲ್ಲೇ ಮೆಟ್ರೊ ರೈಲಿನ ಒಂದು ಬೋಗಿ ನಿರ್ಮಾಣ ವೆಚ್ಚ 9 ರಿಂದ 10 ಕೋಟಿ ರೂ. ಇದೆ. ವಂದೇ ಭಾರತ್ ಸ್ಲೀಪರ್ ಬೋಗಿಗೆ ಅಂದಾಜು 8 ರಿಂದ 9 ಕೋಟಿ ರೂ. ತಗಲುತ್ತಿದೆ” ಎಂದು ರೈಲ್ವೇ ಸಚಿವರು ಹೇಳಿದ್ದಾರೆ.