Connect with us

  DAKSHINA KANNADA

  ಮಂಗಳೂರು : ಮುಚ್ಚುವ ಸ್ಥಿತಿಯತ್ತ 154 ವರ್ಷ ಇತಿಹಾಸವಿರುವ ಗಣಪತಿ ಶಾಲೆ, ಕಾರಣ ನಿಗೂಢ..!

  ಮಂಗಳೂರು : ಸ್ವಾತಂತ್ರ್ಯ ಪೂರ್ವದ ಇತಿಹಾಸ ಹೊಂದಿರುವ ಮಂಗಳೂರು ನಗರದಲ್ಲಿರುವ ಗಣಪತಿ ಶಾಲೆ ಇದೀಗ ಮುಚ್ಚುವ ಹಂತದಲ್ಲಿದೆ. ನಗರದ ಹೃದಯಭಾಗ ಹಂಪನಕಟ್ಟೆಯ ಜಿ.ಹೆಚ್.ಎಸ್ ರೋಡ್ ನಲ್ಲಿರುವ ಗಣಪತಿ ಹೈಸ್ಕೂಲ್ 1870 ಪ್ರಾರಂಭವಾಗಿತ್ತು.

  ಆರಂಭದಲ್ಲಿ ಉಮಾಮಹೇಶ್ವರಿ ದೇವಸ್ಥಾನದ ವಠಾರದಲ್ಲಿ ಶಾಲಾ ಚಟುವಟಿಕೆಗಳು ನಡೆಯುತ್ತಿದ್ದವು. ಬಳಿಕ  1915 ರಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡು ವಿದ್ಯಾರ್ಥಿಗಳಿಗೆ ನಿರಂತರ ಶಿಕ್ಷಣ ನೀಡುತ್ತಿದ್ದರು. 154 ವರ್ಷದ ಇತಿಹಾಸವಿದ್ದ ಶಾಲೆಯಲ್ಲಿ ಸ್ವತಂತ್ರ ಹೋರಾಟಗಾರರಾದ ಕಾರ್ನಾಡ್ ಸದಾಶಿವ ರಾವ್, ಸಂವಿಧಾನ ಕರಡು ಸಮಿತಿಯ ಸದಸ್ಯರಾದ ಬೆನೆಗಲ್ ನರಸಿಂಗ ರಾವ್, ತುಳು ರಂಗಭೂಮಿಯಲ್ಲಿ ಸಾಧನೆ ಮಡಿದ ಸೀತಾರಾಮ್ ಕುಲಾಲ್, ವಿಜಯಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಕಾಪಿಕಾಡ್ ಹಾಗೂ ಇನ್ನಿತರರು ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು.ಪ್ರಸ್ತುತ ಶಾಲೆಯಲ್ಲಿ 322 ವಿದ್ಯಾರ್ಥಿಗಳಿದ್ದರೂ ಒಂದೂವರೆ ವರ್ಷದ ಹಿಂದೆಯಿಂದ ಯಾವುದೇ ಮುನ್ಸೂಚನೆಯನ್ನು ನೀಡದೆ, ವಿದ್ಯಾರ್ಥಿಗಳ ಪಾಲಕರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮಾತನಾಡದೆ, ಶಾಲೆಯ ಆಡಳಿತ ಮಂಡಳಿಯು ಮಕ್ಕಳ ಸಂಖ್ಯೆ ಕಡಿಮೆಯೆಂದು ಪ್ರಚಾರ ಮಾಡಿ, ಶಾಲೆಯನ್ನು ಮುಚ್ಚು ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ವರ್ಷದ ಎಸ್.ಎಸ್.ಎಲ್.ಸಿ ಮಕ್ಕಳ ಹಾಗೂ ಇನ್ನಿತರ ವಿದ್ಯಾರ್ಥಿಗಳ ಭವಿಷ್ಯ ಇವರಿಂದ ಅತಂತ್ರವಾಗಿದೆ. ಮಾಹಿತಿಯ ಪ್ರಕಾರ, ಸದ್ರಿ ಶಾಲಾಡಳಿತ ಮಂಡಳಿಯವರು ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸುಮಾರು ಬಹು ಕೋಟಿ ಮೊತ್ತಕ್ಕೆ ಸದ್ರಿ ಶಾಲೆಯ ಜಾಗವನ್ನು ಮಾರಾಟ ಮಾಡುವ ದೂರ ದ್ರಷ್ಠಿ ಹೊಂದಿದೆ ಎಂದು ತಿಳಿದು ಬಂದಿದೆ. ಒಂದೂವರೆ ಶತಮಾನದ  ಇತಿಹಾಸ ಇರುವ ಈ ಶಾಲೆಯನ್ನು ಉಳಿಸಬೇಕೆಂದು ಇಲ್ಲಿನ ಹಳೇ ವಿದ್ಯಾರ್ಥಿಗಳು ಇದೀಗ ಹೋರಾಟ ರೂಪಿಸುತ್ತಿವೆ ಎಂದು ತಿಳಿದು ಬಂದಿದೆ.

  Share Information
  Advertisement
  Click to comment

  You must be logged in to post a comment Login

  Leave a Reply