Connect with us

    LATEST NEWS

    ಬೀದಿಬದಿ ವ್ಯಾಪಾರಿಗಳ ಸಭೆ ನಡೆಸಿದ ಮಂಗಳೂರು ಮೇಯರ್,ಪರ್ಯಾಯ ವ್ಯವಸ್ಥೆ,ID ಕಾರ್ಡ್ ವಿತರಣೆಗೆ ಆ19 ವರೆಗೆ ಕಾಲಾವಕಾಶ ಕೋರಿಕೆ

    ಮಂಗಳೂರು : ಬೀದಿಬದಿ ವ್ಯಾಪಾರಿಗಳ ಮೇಲೆ ಕಳೆದ 10 ದಿನಗಳಿಂದ ಟೈಗರ್ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಇದರಿಂದಾಗಿ ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘವು ಪಾಲಿಕೆಯ ಟೈಗರ್ ಕಾರ್ಯಾಚರಣೆ ವಿರುದ್ಧ ತೀವ್ರ ಪ್ರತಿರೋಧವನ್ನು ದಾಖಲಿಸುತ್ತಾ ಬಂದಿದೆ.

    ಆಗಸ್ಟ್ 7ರಂದು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಮೇಯರ್ ಮತ್ತು ಪಾಲಿಕೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದರು ಈ ಹಿನ್ನೆಲೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಬೀದಿಬದಿ ವ್ಯಾಪಾರಿಗಳ ಸಭೆ ನಡೆಸಿದ್ದಾರೆ.
    667 ಮಂದಿಗೆ ಐಡಿ ಕಾರ್ಡ್ ಮತ್ತು ಬೀದಿ ವ್ಯಾಪಾರ ವಲಯ ರಚನೆ ಮಾಡಲು ಆಗಸ್ಟ್ 19 ವರೆಗೆ ಕಾಲಾವಕಾಶ ಕೋರಿದರು. ಸಂಘದ ಗೌರವಾಧ್ಯಕ್ಷ ಬಿಕೆ ಇಮ್ತಿಯಾಜ್ ಮಾತನಾಡಿ ವ್ಯಾಪಾರ ವಲಯ ಮತ್ತು ಐಡಿ ಕಾರ್ಡ್ ವಿತರಣೆ ಮಾಡುವವರೆಗೆ ಟೈಗರ್ ಕಾರ್ಯಾಚರಣೆ ನಿಲ್ಲಿಸಬೇಕೆಂದು ಮೇಯರ್ ಅವರನ್ನು ಒತ್ತಾಯಿಸಿದರು . ಆಹಾರ ಮಾರಾಟಗಾರರಿಗೆ ಸಂಜೆ 4ರಿಂದ ರಾತ್ರಿ 11 ವರೆಗೆ ಅವಕಾಶ ನೀಡುವಂತೆ ಕೋರಲಾಯಿತು ಅದಕ್ಕೆ ಆಗಸ್ಟ್ 19 ರವರೆಗೆ ಕಾಯಿರಿ ನಮ್ಮಿಂದ ಸಾಧ್ಯ ಆಗದಿದ್ದರೆ ಯಥಾಸ್ಥಿತಿ ವ್ಯಾಪಾರ ಮುಂದುವರಿಸಿ ಎಂದು ತಿಳಿಸಿದರು ಸಂಘದ ಮುಖಂಡರಾದ ಶ್ರೀನಿವಾಸ್ ಕಾವೂರು, ಗೋಪಾಲ್, ಅನಿಲ್ , ರಹಿಮಾನ್ ಮುಂತಾದವರು ಮಾತನಾಡಿದರು

    Share Information
    Advertisement
    Click to comment

    You must be logged in to post a comment Login

    Leave a Reply