Connect with us

    LATEST NEWS

    ಮಗುವನ್ನು ನೋಡಲೆಂದು ಪತ್ನಿ ಮನೆಗೆ ಬಂದ ಅಳಿಯನ ಹಲ್ಲು ಕಿತ್ತ ಮಾವ..!

    ತಿರುವನಂತಪುರಂ, ಆಗಸ್ಟ್ 05: ವ್ಯಕ್ತಿಯೊಬ್ಬ ಕೆಲ ವರ್ಷಗಳ ಬಳಿಕ ಮಗುವನ್ನು ನೋಡಲೆಂದು ಪತ್ನಿ ಮನೆಗೆ ತೆರಳಿದ್ದಾನೆ. ಈ ವೇಳೆ ಮಾವ ಮಾರಣಾಂತಿಕವಾಗಿ ಹಲ್ಲೆಗೈದು ಅಳಿಯನ ಹಲ್ಲು ಕಿತ್ತ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕುರುತಲಿಕಾಡ್ ಪೊಲೀಸರು ಆರೋಪಿ ವಿಜಯನ್ (58) ಎಂಬಾತನನ್ನು ಬಂಧಿಸಿದ್ದಾರೆ.

    ಗಾಯಾಳುವನ್ನು ರಾಜ್‍ಮೋಹನ್ ಎಂದು ಗುರುತಿಸಲಾಗಿದೆ. ಕಳೆದ ವರ್ಷಗಳಿಂದ ರಾಜ್ ಮೋಹನ್ ತನ್ನ ಪತ್ನಿಯಿಂದ ದೂರವಾಗಿದ್ದು, ಆಕೆ ತವರು ಮನೆ ಸೇರಿಕೊಂಡಿದ್ದಳು. ಈ ದಂಪತಿಗೆ ಮಗು ಕೂಡ ಇತ್ತು. ಹೀಗಾಗಿ 4 ವರ್ಷಗಳ ಬಳಿಕ ರಾಜ್ ಮೋಹನ್ ತನ್ನ ಮಗುವನ್ನು ನೋಡಲೆಂದು ಪತ್ನಿ ಮನೆಗೆ ತೆರಳಿದ್ದಾನೆ.

    ರಾಜ್ ಮೋಹನ್ ಪತ್ನಿ ಮನೆಗೆ ಹೋಗುತ್ತಿದ್ದಂತೆಯೇ ಅಲ್ಲಿ ಪತ್ನಿ ಇರಲಿಲ್ಲ. ಆಕೆ ಅಲ್ಲಿ ಮಗುವನ್ನು ಬಿಟ್ಟು ಬೇರೊಬ್ಬನ ಜೊತೆ ಹೋಗಿದ್ದಳು. ಇತ್ತ ಅಳಿಯ ಬಂದಿದ್ದನ್ನು ನೋಡಿದ ಮಾವ ಕಬ್ಬಿಣದ ರಾಡ್‍ನಿಂದ ಹಿಗ್ಗಾಮುಗ್ಗವಾಗಿ ಹಲ್ಲೆ ಮಾಡಿದ್ದಾನೆ.

    ರಾಡ್‍ನಿಂದ ಮುಖಕ್ಕೆ ಹೊಡೆದ ಪರಿಣಾಮ ರಾಜ್ ಮೋಹನ್ ಹಲ್ಲುಗಳೇ ಕಿತ್ತು ಹೊರಬಂದಿವೆ. ಸದ್ಯ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಬೈಜು ಬಿಂದುರಾಜ್ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply