KARNATAKA
ಪಂಪ್‌ಸೆಟ್ ದುರಸ್ತಿ ಮಾಡಲು ಹೋಗಿದ್ದ ಅಪ್ಪ ಮಗ ಕರೆಂಟ್ ಶಾಕ್ ಗೆ ಬಲಿ..!
ಹಾವೇರಿ, ಆಗಸ್ಟ್ 07 : ಪಂಪ್‌ಸೆಟ್ ದುರಸ್ತಿ ಮಾಡಲು ಹೋಗಿ ಕರೆಂಟ್ ಶಾಕ್ ತಗುಲಿ ಅಪ್ಪ – ಮಗ ಮೃತಪಟ್ಟಿರುವ ದಾರುಣ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಭತ್ತದ ಬೆಳೆಗೆ ನೀರು ಹಾಯಿಸುವ ಪಂಪ್ ಸೆಟ್ ಹಾಳಾಗಿದ್ದು ಅದನ್ನು ದುರಸ್ತಿ ಮಾಡಿ ಮೋಟಾರು ಸ್ಟಾರ್ಟ್ ಮಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದ್ದು, ವಿದ್ಯುತ್ ಆಘಾತದಿಂದ ತಂದೆ-ಮಗ ಪಂಪಸೇಟ್ ಮೇಲೆಯೇ ಬಿದ್ದು ದಾರುಣ ಅಂತ್ಯ ಕಂಡಿದ್ದಾರೆ. ಕರಬಸಪ್ಪ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ ದರ್ಶನ (26) ಮೃತ ದುರ್ದೈವಿಗಳಾಗಿದ್ದಾರೆ . ಹಲಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ತೆರಳಿದ್ದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನು ಓದಿ..
’82 ವರ್ಷ ವಯಸ್ಸಿನಲ್ಲಿ ಇದು ಬೇಕಿತ್ತಾ?’ ಯಡಿಯೂರಪ್ಪ ವಿರುದ್ದ ಸಿಎಂ ಸಿದ್ದರಾಮಯ್ಯ ಗುಡುಗು..!
You must be logged in to post a comment Login