FILM
ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರಿಸ್ -ಎಲ್ಲರ ಹುಬ್ಬೇರಿಸಿದ ಸಮಂತಾ ಬೋಲ್ಡ್ ಸೀನ್

ಮುಂಬೈ : ಬಾಲಿವುಡ್ ನಟ ಮನೋಜ್ ಬಾಜ್ಪಾಯಿ ನಟಿಸಿರುವ ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರಿಸ್ ನ ಎರಡನೇ ಸೀಸನ್ ಈಗಾಗಲೇ ಹಿಟ್ ಆಗಿದೆ. ಈ ನಡುವೆ ವೆಬ್ ಸಿರಿಸ್ ನಲ್ಲಿ ನಟಿ ಸಮಂತಜಾ ಅಕ್ಕಿನೇನಿ ಅವರ ಪಾತ್ರದ ಬಗ್ಗೆ ಅಪಾರ ಮೆಚ್ಚುಗೆ ಪಾತ್ರವಾಗಿದ್ದು, ಅವರ ಸಿನೆಮಾ ಜೀವನದಲ್ಲಿ ಮೊದಲ ಬಾರಿ ಬೋಲ್ಡ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀಲಂಕಾದ ತಮಿಳು ಕ್ರಾಂತಿಕಾರಿ ರಾಜಿ ಪಾತ್ರದಲ್ಲಿ ಸಮಂತಾ ನಟಿಸಿದ್ದು, ಇದೇ ಮೊದಲ ಬಾರಿಗೆ ಸಮಂತಾ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವೆಬ್ ಸರಣಿಯಲ್ಲಿ ಸಮಂತಾ ಅವರು ತರಬೇತಿ ಪಡೆದ ಕಮ್ಯಾಂಡೋ ರಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿ ಇಲ್ಲದಿರುವ ಪಾತ್ರಧಾರಿಯಾಗಿ ತೋರಿಸಲಾಗಿದೆ.
ಇನ್ನು ಸಮಂತಾ ಅವರು ನಟನೆಯ ಬಗ್ಗೆಯೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಅವರ ದೈಹಿಕ ಭಾಷೆ ಮತ್ತು ನಟನಾ ಕೌಶಲ್ಯವನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಸಮಂತಾರ ಬೋಲ್ಡ್ನೆಸ್ ಎಲ್ಲರ ಹುಬ್ಬೇರಿಸುತ್ತದೆ. ಆಕೆಯ ಲೈಂಗಿಕ ಕಿರುಕುಳ ಅಥವಾ ಬೆಡ್ ಸೀನ್ ಸಾಮಾಜಿಕ ಜಾಲತಾಣಿಗರನ್ನು ಅಚ್ಚರಿಗೆ ದೂಡಿದೆ.