KARNATAKA
ಡ್ರೋನ್ ಕ್ಯಾಮರಾಗಳು ಮೂಲೆ ಸೇರುವ ಕಾಲ ಸನ್ನಿಹಿತ, ಮಾರುಕಟ್ಟೆಗೆ ಲಗ್ಗೆ ಇಡಲಿವೆ ‘ಹಾರುವ ಕ್ಯಾಮೆರಾ ಫೋನ್’ ಗಳು…!
ಮಂಗಳೂರು : ಎತ್ತರದಿಂದ ಫೋಟೊ, ವಿಡಿಯೋಗ್ರಫಿ ಮಾಡುವ ಡ್ರೋನ್ ಕ್ಯಾಮೆರಾಗಳ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇನ್ನು ಈ ಡ್ರೋನ್ ಕ್ಯಾಮರಾಗಳು ಮೂಲೆ ಸೇರುವ ದಿನಗಲೂ ಹೆಚ್ಚು ದೂರವಿಲ್ಲ. ಯಾಕೆಂದ್ರೆ ನಿಮ್ಮ ಕೈಯಲ್ಲಿರುವ ಮೊಬೈಲ್ ಫೋನ್‌ಗಳು ಡ್ರೋನ್ ನಂತೆ ಹಾರಲಿವೆ. ಡ್ರೋನ್ ಕ್ಯಾಮೆರಾಗಳಿಗೆ ಪೈಪೋಟಿ ಎಂಬಂತೆ ಹಾರುವ ಕ್ಯಾಮೆರಾ ಫೋನ್(Flying Camera Phone) ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ.
ವೀವೋ, ಒಪ್ಪೊ, ಸ್ಯಾಮ್ ಸಾಂಗ್ ಹೀಗೇ ಅನೇಕ ಕಂಪೆನಿಗಳು ಹಾರುವ ಮೊಬೈಲ್ ಫೋನ್‌ಗಳನ್ನು ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದ್ದಾರೆ ಇವರ ಮಧ್ಯೆ ಮಧ್ಯಮ ವರ್ಗದ ಜನರನ್ನು ಗಣನೆಗೆ ತಗೊಂಡು ರೆಡ್’ಮಿ ಕಂಪನಿಯು ರೆಡ್’ಮಿ ಫ್ಲೈಯಿಂಗ್ ಕ್ಯಾಮೆರಾ 5G ಫೋನ್ ನ್ನು ಕಡಿಮೆ ಕೈ ಗೆಟ್ಕುವ ದರದಲ್ಲಿ ಬಿಡುಗಡೆ ಮಾಡಿದೆ.
ಇದರಲ್ಲಿ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ದರ, ಗೊರಿಲ್ಲಾ ಗ್ಲಾಸ್ ರಕ್ಷಣೆ ನೀಡಲಾಗಿದೆ. 300MP ಕ್ಯಾಮೆರಾ ಮತ್ತು 6000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ವಿವಿಧ ಮೆಮೊರಿ ಆಯ್ಕೆಗಳು ಲಭ್ಯವಿದ್ದು, 8 GBವರೆಗೆ ಹೆಚ್ಚುವರಿ ಮೆಮೊರಿಯನ್ನು ಹೊಂದಿದೆ. 6.7 ಇಂಚಿನ AMOLED ಡಿಸ್‌ಪ್ಲೇ ಲಭ್ಯವಾಗಲಿದ್ದು, ಡಿಸ್‌ಪ್ಲೇ ಯು (2400 x 1080 ಪಿಕ್ಸೆಲ್ ಗಳ) ರೆಸಲ್ಯೂಶನ್ ನ್ನು ಹೊಂದಿರಲಿದೆ. ಈ ಮೊಬೈಲ್ ನ ಒಟ್ಟು ತೂಕ ಸುಮಾರು 180 ಗ್ರಾಂ ಆಗಿರುತ್ತೆ ಎನ್ನಲಾಗಿದೆ. IP68 ರೇಟಿಂಗ್ ಹೊಂದಿದೆ.
ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಸಾಮರ್ಥ್ಯದೊಂದಿಗೆ ಭಾರತದ ಮಾರುಕಟ್ಟೆಗೆ ಬರಲಿದೆ. 4GB RAM + 64GB ಇಂಟರ್ ನಲ್ ಸ್ಟೋರೇಜ್, 6GB RAM, 128GB ಇಂಟರ್‌ನಲ್ ಸ್ಟೋರೇಜ್ ಮತ್ತು 256GB ವರೆಗಿನ ಇಂಟರ್‌ನಲ್ ಸ್ಟೋರೇಜ್ ನ್ನು 8GB RAMನೊಂದಿಗೆ ಒದಗಿಸಲಾಗುತ್ತಿದೆ. ಇದರ ಆರಂಭಿಕ ಬೆಲೆ 15,000 ರೂ. ಆಕರ್ಷಕ ರಿಯಾಯಿತಿಗಳು ಲಭ್ಯ. ರಿಯಾಯಿತಿ ಮತ್ತು ಆಕರ್ಷಕ ಆಫರ್ ಬಳಸಿಕೊಂಡು ಈ ವಿಶೇಷ ಸ್ಮಾರ್ಟ್ ಫೋನ್ ನ್ನು 10 ಸಾವಿರ ರೂಪಾಯಿವರೆಗೂ ಖರೀದಿಸಬಹುದು ಎಂದು ಹೇಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನಿಮ್ಮ ಕೈಯಲ್ಲಿರುವ ಮೊಬೈಲ್ ಫೋನ್ ಗಳು ಹಾರಾಲು ಆರಂಭಿಸಿದ್ರೆ ಅಚ್ಚರಿಯಿಲ್ಲ.