Connect with us

KARNATAKA

ಶಿವಮೊಗ್ಗ : ಹಸಿವಿನಿಂದ ಬಂದವನಿಗೆ ಊಟ ಕೊಡದೆ ಮೊಬೈಲ್‌ನಲ್ಲಿ ಬಿಜಿ, ಪತ್ನಿಯನ್ನು ಥಳಿಸಿ ಕೊಂದ ಪತಿ..!

ಶಿವಮೊಗ್ಗ : ಹಸಿವಿನಿಂದ ಮನೆಗೆ ಬಂದ ಗಂಡನಿಗೆ ಊಟ ಕೊಡದೆ ಮೊಬೈಲ್‌ನಲ್ಲಿ ಬಿಜಿಯಾಗಿದ್ದ ಪತ್ನಿಯನ್ನು ಗಂಡ  ತಳಿಸಿ ಕೊಂದ ಪ್ರಕರಣ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ನನಗೆ ಹಸಿವಾಗಿದೆ ಬಂದು ಊಟ ಕೊಡು ಎಂದು ಹೇಳಿದರೂ ಗಂಡನಿಗೆ ಊಟ ಕೊಡದೇ ಮೊಬೈಲ್‌ನಲ್ಲಿ ಮಾತನಾಡುತ್ತಾ ಹರಟೆ ಹೊಡೆಯುತ್ತಿದ್ದ ಹೆಂಡತಿಯ ಮೇಲೆ ಹಲ್ಲೆ ಮಾಡಿದ ಗಂಡ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ.  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಊಟ ಬಡಿಸಲು ಒಪ್ಪದ ಪತ್ನಿಯನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾರೆ. ಮೃತ ಗೃಹಿಣಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗೌರಮ್ಮ (28) ಎಂದು ತಿಳಿದುಬಂದಿದೆ. ಈ ಮಹಿಳೆಯ ಗಂಡ ಮನು ಎಂಬ ವ್ಯಕ್ತಿಯೇ ತನ್ನ ಹೆಂಡತಿ ಗೌರಮ್ಮನನ್ನು ಕೊಲೆ ಮಾಡಿ ಬೀಸಾಡಿದ್ದಾನೆ. ಆದರೆ, ಕೇವಲ ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದ ಗಂಡ ತನ್ನ ಹೆಂಡತಿ ಗೌರಮ್ಮನಿಗೆ ನಿನ್ನೆ ರಾತ್ರಿ ವೇಳೆ ಊಟ ಕೊಡುವಂತೆ ಕೇಳಿದ್ದಾನೆ. ಆದರೆ, ಹೆಂಡತಿ ಮಾತ್ರ ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಾ ಗಂಡನಿಗೆ ಊಟ ಕೊಡಲು ನಿರಾಕರಿಸಿದ್ದಾಳೆ. ನಿನಗೆ ಕೈ ಇಲ್ಲವೇ ನೀನೇ ಊಟ ಬಡಿಸಿಕೊಂಡು ಮಾಡು ಹೋಗು ಎಂದು ಹೇಳಿದ್ದಾಳೆ. ಜೊತೆಗೆ, ನಾನು ಫೋನಿನಲ್ಲಿ ಮಾತನಾಡುತ್ತಿದ್ದೇನೆ, ಈಗ ಊಟ ಕೊಡಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಕಳಿಸಿದ್ದಾಳೆ. ಆದರೂ, ಮತ್ತೊಂದು ಬಾರಿ ಹೆಂಡತಿಯನ್ನು ಊಟ ಕೊಡುವಂತೆ ಕೇಳಿದಾಗ ಸಿಟ್ಟಾಗಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಹೆಂಡತಿ ತನಗೆ ಊಟ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡ ಗಂಡ ಮನು, ಏಕಾಏಕಿ ಪತ್ನಿಗೆ ಥಳಿಸಿ ನಂತರ ಟವೆಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ನಂತರ ಹೆಂಡತಿಯ ತಂದೆಗೆ ಕರೆ ಮಾಡಿ ನಿಮ್ಮ ಮಗಳು ಸತ್ತು ಹೋಗಿದ್ದಾಳೆ ಎಂದು ಹೇಳಿದ್ದಾನೆ. ಆಗ ಮಗಳನ್ನು ಕಳೆದುಕೊಂಡ ದುಃಖದಿಂದ ಸ್ಥಳಕ್ಕೆ ಬಂದ ಮೃತ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಮಹಿಳೆಯ ತಂದೆ ನೀಡಿದ ದೂರನ್ನು ದಾಖಲಿಸಿಕೊಂಡು ಆಕೆಯ ಗಂಡ ಮನು ನನ್ನು ಬಂಧಿಸಿದ್ದಾರೆ. ಈ ಘಟನೆ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *