ಪಟ್ರಮೆ, ಮಾರ್ಚ್ 9: ಮರ ಕಡಿಯುವ ವೇಳೆ ಮರದ ಅಡಿಗೆ ಬಿದ್ದು ಮೂವರು ಯುವಕರು ಮೃತ ಪಟ್ಟ ಘಟನೆ ಪಟ್ರಮೆ ಗ್ರಾಮದ ಅನಾರು ಬಳಿ ಕಾಯಿಲದಲ್ಲಿ ನಡೆದಿದೆ.

ಪಟ್ರಮೆ ಗ್ರಾಮದ ಅನಾರು ಬಳಿ ಕಾಯಿಲ ಎಂಬಲ್ಲಿ ಸ್ಥಳವೊಂದರಲ್ಲಿದ್ದ ದೂಪದ ಮರವೊಂದನ್ನ ಕಡಿದು ಉರುಳಿಸುವ ವೇಳೆ ಮರದ ಅಡಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟ ಘಟನೆ ಮಂಗಳವಾರದಂದು ಮದ್ಯಾಹ್ನದ ವೇಳೆ ನಡೆದಿದೆ.

ಮೃತಪಟ್ಟವರನ್ನು ಪಟ್ರಮೆಯ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್(21), ಸೇಸಪ್ಪ ಪೂಜಾರಿಯವರ ಮಗ ಸ್ವಸ್ತಿಕ್ (23),ಮತ್ತು ಇನ್ನೋರ್ವ ಕನ್ಯಾಡಿ ಮೂಲದ ಯುವಕ ಎಂದ ತಿಳಿದು ಬಂದಿದೆ. ಅನಾರು ಕಾಯಿಲ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿದ್ದ ದೂಪದ ಮರವನ್ನು ಕಡಿದು ಉರುಳಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Share Information