Connect with us

    LATEST NEWS

    ಪುತ್ತೂರು ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಿರುಕುಳ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ

    ಪುತ್ತೂರು ಮಾರ್ಚ್ 9: ಬಸ್ ನಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಪುತ್ತೂರಿನ ಗಡಿಪಿಲ ಎಂಬಲ್ಲಿ ನಡೆದಿದೆ.


    ಆರೋಪಿಯನ್ನು ಪುತ್ತೂರಿನ ಬಸ್ ನಿಲ್ದಾಣದ ಬಳಿ ಅಂಗಡಿ ಹೊಂದಿರುವ ಬೆಟ್ಟಂಪಾಡಿಯ ನೌಫಲ್ ಎಂದು ಗುರುತಿಸಲಾಗಿದೆ.

    ನಿನ್ನೆ ಸಂಜೆ ಸವಣೂರು ಮೂಲಕ ಕಡಬ ಹೋಗುತ್ತಿದ್ದ ಬಸ್ ಏರಿದ್ದ ಆತ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯೋರ್ವರ ಜೊತೆ ಅಸಭ್ಯವಾಗಿ ವರ್ತಿಸಿದ್ದರು.

    ಈ ವಿಷಯ ತಿಳಿದು ಸಂಘಟನೆಯೊಂದರ ಕಾರ್ಯಕರ್ತರು ಬಸ್ ಗಡಿಪ್ಪಿಲ ತಲುಪುತ್ತಿದ್ದಂತೆ ಬಸ್ ಅನ್ನು ನಿಲ್ಲಿಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply