LATEST NEWS
ಐಪೋನ್ ಗಾಗಿ ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಕಾಲುವೆಗೆ ಬಿಸಾಡಿದ ಆರೋಪಿಗಳು…!!
ಲಕ್ನೋ ಅಕ್ಟೋಬರ್ 01: ಐಪೋನ್ ನ ಕ್ಯಾಶ್ ಆನ್ ಡೆಲಿವರಿ ವೇಳೆ ಫ್ಲಿಪ್ಕಾರ್ಟ್ ಡೆಲಿವರಿ ಬಾಯನ್ನು ಭೀಕರವಾಗಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆದ ಘಟನೆ ಲಕ್ನೋದಲ್ಲಿ ನಡೆದಿದೆ.
ಐಫೋನ್ ಆರ್ಡರ್ ಮಾಡಿದ ಗ್ರಾಹಕ ಮತ್ತು ಆತನ ಸ್ನೇಹಿತ ಡೆಲಿವರಿ ಬಾಯನ್ನು ಕೊಂದಿದ್ದು, ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ನೋದ ಚಿನ್ಹಾಟ್ ಸ್ಟೇಷನ್ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ. ಭರತ್ ಕುಮಾರ್ (30) ಎಂಬ ದುರ್ದೈವಿ ಕೊಲೆಯಾಗಿದ್ದಾನೆ. ಡೆಲಿವರಿ ಬಾಯ್ ಮಂಗಳವಾರದಂದು ಐಫೋನ್ ಡೆಲಿವರಿ ಮಾಡುವಾಗ ಹಂತಕರ ಕೈಯಿಂದ ಹತ್ಯೆಯಾಗಿದ್ದಾನೆ. ಗ್ರಾಹಕ ಆನ್ಲೈನ್ನಲ್ಲಿ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮೂಲಕ ಐಫೋನ್ ಆರ್ಡರ್ ಮಾಡಿದ್ದು, ಡೆಲಿವರಿಗೆ ಬಂದಾಗ ಭರತ್ ಕುಮಾರ್ನನ್ನು ಸ್ನೇಹಿತನ ಜೊತೆಗೂಡಿ ಹತ್ಯೆ ಮಾಡಿದ್ದಾನೆ. ಬಳಿಕ ಗೋಣಿ ಚೀಲದಲ್ಲಿ ತುಂಬಿಸಿ ಇಂದಿರಾ ನಗರದ ಕಾಲುವೆಗೆ ಎಸೆದಿದ್ದಾರೆ.
ಸದ್ಯ ಪೊಲೀಸರು ಓರ್ವ ಶಂಕಿತ ಆರೋಪಿ ಗಜಾನನ್ ಎಂಬಾತನನ್ನು ಬಂಧಿಸಿದ್ದಾರೆ. ಡೆಲಿವರಿ ಬಾಯ್ ಭರತ್ ಮೃತದೇಹವನ್ನು ಪೊಲೀಸರು ಕಾಲುವೆಯಲ್ಲಿ ಹುಡುಕಾಡುತ್ತಿದ್ದಾರೆ.
You must be logged in to post a comment Login