FILM
ನಿಮ್ಮದೆಷ್ಟಿದೆ ನೀವು ನೊಡ್ಕೊಳ್ಳಿ – ಬಿಗ್ ಬಾಸ್ ನಲ್ಲಿ ಚೈತ್ರಾ ಕುಂದಾಪುರ ತಿರುಗೇಟು..!!
ಬೆಂಗಳೂರು ಅಕ್ಟೋಬರ್ 1: ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಇನ್ನೂ ಮೂರು ದಿನ ಆಗಿಲ್ಲ. ಈಗಾಗಲೇ ಸ್ಪರ್ಧಿಗಳ ಜಗಳ ಪ್ರಾರಂಭವಾಗಿದೆ. ಅದರಲ್ಲೂ ಚೈತ್ರಾ ಕುಂದಾಪುರ ಮಾತ್ರ ಇಡೀ ಬಿಗ್ ಬಾಸ್ ಮನೆಯನ್ನೇ ಸ್ಟೇಜ್ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಎದುರು ಜಗಳಕ್ಕೆ ನಿಲ್ಲುವವರಿಗೆ ಸರಿಯಾಗೇ ತಿರುಗೇಟು ನೀಡುತ್ತಿದ್ದಾರೆ. ಸ್ಪರ್ಧಿಗಳು, ನಾವು ಬಂದಿರುವುದೇ ಜಗಳವಾಡಲು ಎಂಬಂತೆ ಭಾರಿ ಉತ್ಸಾಹದಲ್ಲಿ ಪರಸ್ಪರ ಜಗಳವಾಡುತ್ತಿದ್ದಾರೆ. ಮೊದಲ ಎರಡು ದಿನದಲ್ಲಿಯೇ ಚೈತ್ರಾ ಕುಂದಾಪುರ ಹಾಗೂ ಇತರರು ತಮ್ಮ ಜಗಳವಾಡುವ ಪ್ರತಿಭೆ ಪ್ರದರ್ಶಿಸಿದ್ದಾರೆ. ಮೂರನೇ ದಿನವೂ ಮನೆಯಲ್ಲಿ ಜಗಳ ಮುಂದುವರೆದಿದೆ. ಜಗದೀಶ್ ಹಾಗೂ ಇತರರ ಮೇಲೆ ಸಿಟ್ಟು ಪ್ರದರ್ಶಿಸಿದ್ದ ಚೈತ್ರಾ ಕುಂದಾಪುರ ಈಗ ಮಾನಸ ಮೇಲೆ ತಮ್ಮ ಮಾತಿನ ಬಾಣಗಳನ್ನು ಪ್ರಯೋಗಿಸಿದ್ದಾರೆ.
ಈಗ ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ, ಚೈತ್ರಾ ಧ್ಯಾನ ಮಾಡುತ್ತಿರುತ್ತಾರೆ, ಅದನ್ನು ನೋಡಿದ ಮಾನಸ, ಈ ಧ್ಯಾನ ಮಾಡುವವರನ್ನು ನೋಡಿದರೆ ನನಗೆ ಸಣ್ಣ ಅನುಮಾನ, ಅವರು ಧ್ಯಾನ ಮಾಡುತ್ತಾರಾ ಅಥವಾ ನಿದ್ದೆ ಮಾಡುತ್ತಾರಾ ಎಂದು ಎಂದಿದ್ದಾರೆ. ಇದು ಬಹುಷಃ ಚೈತ್ರಾ ಕಿವಿಗೆ ಬಿದ್ದು ಮಾನಸ ಮೇಲೆ ಜಗಳ ಮಾಡಿದ್ದಾರೆ.
ನರಕಕ್ಕೆ ಕಿಚ್ಚು ಹಚ್ಚಿದ ‘ಡೌಟ್’
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/UO2S2XuC4a
— Colors Kannada (@ColorsKannada) October 1, 2024
You must be logged in to post a comment Login