Connect with us

LATEST NEWS

ಐಪೋನ್ ಗಾಗಿ ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಕಾಲುವೆಗೆ ಬಿಸಾಡಿದ ಆರೋಪಿಗಳು…!!

ಲಕ್ನೋ ಅಕ್ಟೋಬರ್ 01: ಐಪೋನ್ ನ ಕ್ಯಾಶ್ ಆನ್ ಡೆಲಿವರಿ ವೇಳೆ ಫ್ಲಿಪ್​ಕಾರ್ಟ್​ ಡೆಲಿವರಿ ಬಾಯನ್ನು ಭೀಕರವಾಗಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆದ ಘಟನೆ ಲಕ್ನೋದಲ್ಲಿ ನಡೆದಿದೆ.
ಐಫೋನ್​ ಆರ್ಡರ್​ ಮಾಡಿದ ಗ್ರಾಹಕ ಮತ್ತು ಆತನ ಸ್ನೇಹಿತ ಡೆಲಿವರಿ ಬಾಯನ್ನು ಕೊಂದಿದ್ದು, ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.


ಲಕ್ನೋದ ಚಿನ್​ಹಾಟ್​ ಸ್ಟೇಷನ್​​ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ. ಭರತ್​ ಕುಮಾರ್ (30) ಎಂಬ ದುರ್ದೈವಿ ಕೊಲೆಯಾಗಿದ್ದಾನೆ. ಡೆಲಿವರಿ ಬಾಯ್​ ಮಂಗಳವಾರದಂದು ಐಫೋನ್​ ಡೆಲಿವರಿ ಮಾಡುವಾಗ ಹಂತಕರ ಕೈಯಿಂದ ಹತ್ಯೆಯಾಗಿದ್ದಾನೆ. ಗ್ರಾಹಕ ಆನ್​ಲೈನ್​ನಲ್ಲಿ ಕ್ಯಾಶ್​ ಆನ್​ ಡೆಲಿವರಿ ಆಯ್ಕೆ ಮೂಲಕ ಐಫೋನ್​ ಆರ್ಡರ್​ ಮಾಡಿದ್ದು, ಡೆಲಿವರಿಗೆ ಬಂದಾಗ ಭರತ್​ ಕುಮಾರ್​​ನನ್ನು ಸ್ನೇಹಿತನ ಜೊತೆಗೂಡಿ ಹತ್ಯೆ ಮಾಡಿದ್ದಾನೆ. ಬಳಿಕ ಗೋಣಿ ಚೀಲದಲ್ಲಿ ತುಂಬಿಸಿ ಇಂದಿರಾ ನಗರದ ಕಾಲುವೆಗೆ ಎಸೆದಿದ್ದಾರೆ.

 

ಸದ್ಯ ಪೊಲೀಸರು ಓರ್ವ ಶಂಕಿತ ಆರೋಪಿ ಗಜಾನನ್ ಎಂಬಾತನನ್ನು ಬಂಧಿಸಿದ್ದಾರೆ. ಡೆಲಿವರಿ ಬಾಯ್​ ಭರತ್​ ಮೃತದೇಹವನ್ನು ಪೊಲೀಸರು ಕಾಲುವೆಯಲ್ಲಿ ಹುಡುಕಾಡುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *