KARNATAKA
ರಾಜ್ಯಕ್ಕೆ 1200 MT ಆಕ್ಸಿಜನ್- 5,75,000 ಡೋಸ್ ರೆಮ್ಡೆಸಿವಿರ್ ಪೂರೈಕೆಗೆ ಕೇಂದ್ರದ ಒಪ್ಪಿಗೆ

ಬೆಂಗಳೂರು, ಮೇ 09: ರಾಜ್ಯದಲ್ಲಿ ಕೊರೊನಾ ಕೇಕೆಯ ನಡುವೆ ರಾಜ್ಯ ನಾಯಕರ ದೆಹಲಿ ಭೇಟಿ ಕುತೂಹಲ ಕೆರಳಿಸಿತ್ತು. ಆಕ್ಸಿಜನ್ & ರೆಮ್ಡೆಸಿವಿರ್ ಕೊರತೆ ನೀಗಿಸಲು ನಿನ್ನೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಮೇ 16 ರವರೆಗೆ ರಾಜ್ಯಕ್ಕೆ 5,75,000 ಡೋಸ್ ರೆಮ್ಡೆಸಿವಿರ್ ನೀಡಲು ಕೇಂದ್ರ ಸಮ್ಮತಿ ನೀಡಿದೆ. ಇನ್ನು, ರಾಜ್ಯದಲ್ಲಿನ ಆಕ್ಸಿಜನ್ ಕೊರತೆ ಬಗ್ಗೆಯೂ ಹರ್ಷವರ್ಧನ್ ಹತ್ತಿರ ಪ್ರಸ್ತಾಪಿಸಿರೋ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ವಿಜಯೇಂದ್ರ, ಸದ್ಯ ರಾಜ್ಯದಲ್ಲಿ ಆಕ್ಸಿಜನ್ ಬೇಕಾಗಿರೋ ರೋಗಿಗಳು ಹೆಚ್ಚಾಗುತ್ತಿದ್ದಾರೆ.

ಅವರಿಗೆ ಆಕ್ಸಿಜನ್ ಸರಬರಾಜು ತುಂಬಾ ಮುಖ್ಯವಾಗಿದೆ. ಆಕ್ಸಿಜನ್ ಕೊರತೆಯಿಂದಲೆ ಕೆಲವು ಕಡೆ ಅವಘಡಗಳಾಗಿವೆ. ಹಾಗಾಗಿ ನಮಗೆ ಪ್ರತಿದಿನ 1200 ಮೆಟ್ರಿಕ್ ಟನ್ಗೂ ಹೆಚ್ಚಿನ ಆಕ್ಸಿಜನ್ ಬಳಕೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಹರ್ಷವರ್ಧನ್ ಸುಪ್ರೀಂ ಕೋರ್ಟ್ ಆದೇಶದಂತೆ ನಾವು 1200 ಮೆಟ್ರಿಕ್ ಟನ್ ನೀಡುತ್ತೆವೆ ಅಂತ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.