Connect with us

LATEST NEWS

ಜನತಾ ಲಾಕ್ಡೌನ್ ಗೆ ಉಡುಪಿ ಸಂಪೂರ್ಣ ಸ್ತಬ್ಧ… ಮೀನು ಮಾರುಕಟ್ಟೆಯಲ್ಲಿ ಮಾತ್ರ ಭರ್ಜರಿ ವ್ಯಾಪಾರ

ಉಡುಪಿ, ಮೇ 09: ಜನತಾ ಲಾಕ್ಡೌನ್ ಗೆ ಉಡುಪಿಯಲ್ಲಿ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ಅಗತ್ಯ ವಸ್ತುಗಳಿಗೆ ಮಾತ್ರ ಜನ ಹೊರಬರುತ್ತಿದ್ದು, ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ವಿರಳ ವಾಹನ ಓಡಾಟ ಕಂಡುಬಂತು.

ಉಡುಪಿಯ ಮೀನು ಮಾರುಕಟ್ಟೆಯಲ್ಲಿ ಕೊಂಚ ಚಟುವಟಿಕೆ ಕಂಡುಬಂದಿದೆ. ಜನ ವಾಹನಗಳಲ್ಲಿ ಬಂದು ಮೀನುಗಳನ್ನು ಖರೀದಿ ಮಾಡುತ್ತಿದ್ದಾರೆ. ನಾಳೆಯಿಂದ ಮಾರ್ಕೆಟ್ ಗೆ ಬರೋದಕ್ಕೆ ಸಾಧ್ಯವಾಗದಿರೋದರಿಂದ ಇವತ್ತೇ ಜಾಸ್ತಿ ಮೀನ್ ಖರೀದಿ ಮಾಡುತ್ತಿದ್ದಾರೆ.

ತಳ್ಳುಗಾಡಿಯಲ್ಲಿ ಹಣ್ಣು-ಹಂಪಲು ಮಾರುವ ಗ್ರಾಹಕರು ಎಂದಿನಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದಿನಸಿ ತರಕಾರಿ ಅಂಗಡಿಗಳಲ್ಲಿ ಮಾಮೂಲಿ ವ್ಯಾಪಾರ ವಹಿವಾಟು ಇತ್ತು. ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕೂಲಿ ಅರಸಿ ಕಾದು ನಿಂತ ದೃಶ್ಯ ಕಂಡುಬಂತು. ಕಾರ್ಮಿಕರು ಎಂದಿನಂತೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಮದ್ಯದಂಗಡಿಯಲ್ಲಿ ಖರೀದಿ ಭರಾಟೆ ಕಂಡುಬಂತು.

ಮೀನು ಮಾರುಕಟ್ಟೆಗಳು ಇರುವ ವ್ಯಾಪ್ತಿಯ ಜನ ನಾಳೆ ಕಾಲ್ನಡಿಗೆಯಲ್ಲೇ ಬಂದು ಬೆಳಗ್ಗೆ 10 ಗಂಟೆಯವರೆಗೆ ಮೀನು ಖರೀದಿ ಮಾಡಬಹುದು. ರೆಸಿಡೆನ್ಶಿಯಲ್ ಏರಿಯಾ ನಗರದ ಹೊರವಲಯ ಗಳಿಗೆ ನಾಳೆಯಿಂದ ದ್ವಿಚಕ್ರ ವಾಹನಗಳಲ್ಲಿ ಮೀನು ಸಾಗಾಟ ಆಗಲಿದೆ.

Video: