KARNATAKA
ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಸ್, ಚಾಲಕನ ಸಮಯ ಪ್ರಜ್ಞೆ ಉಳಿಸಿತು ಪ್ರಯಾಣಿಕ ಜೀವ..!
ವಿಜಯಪುರ: ಬಸ್ ನ ಟೈರ್ ಸ್ಪೋಟಗೊಂಡು ಇಡೀ ಬಸ್ ಹೊತ್ತಿ ಉರಿದಿರುವ ಘಟನೆ ವಿಜಯಪುರದ ಹಿಟ್ಟಿನಹಳ್ಳಿ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ನಡೆದಿದೆ.
ಹಿಟ್ಟಿನ ಹಳ್ಳಿ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ವಿಜಯಪುರಕ್ಕೆ ಹೊರಟಿದ್ದ ಜನತಾ ಟ್ರಾವೆಲ್ಸ್ ನ ಬಸ್ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. . ಇನ್ನೇನು ವಿಜಯಪುರ ನಗರ ತಲುಪಲು 15 ಕಿ.ಮಿ. ದೂರವಿತ್ತು. ಟೈರ್ ಸ್ಪೋಟದ ಪರಿಣಾಮ ಬಸ್ ಗೆ ಬೆಂಕಿ ಹಿಡಿದಿದೆ. ಸಮಯ ಪ್ರಜ್ಞೆ ಮೆರೆದ ಚಾಲಕ ಕೂಡಲೇ ಪ್ರಯಾಣಿಕರನ್ನು ಬಸ್ ನಿಂದ ಕೆಳಗಿಳಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ ಇದರಿಂದ ಇಡೀ ಬಸ್ ಸುಟ್ಟುಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಬಂದು ಬೆಂಕಿ ನಂದಿಸಿದ್ದಾರೆ. ಪ್ರಯಾಣಿಕರು ಬಸ್ ನಿಂದ ಕೆಳಗಿಳಿಯವಷ್ಟರಲ್ಲೇ ಬೆಂಕಿ ಹತ್ತಿಕೊಂಡಿದ್ದರಿಂದ ಲಗೇಜ್ ಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಎಲ್ಲರ ಲಗೇಜ್ ಗಳು ಬೆಂಕಿಗಾಹುತಿಯಾಗಿವೆ. ಬೆಳೆ ಬಾಳುವ ವಸ್ತುಗಳು, ಬಟ್ಟೆಗಳು, ನಗದು ಒಡವೆ ಲಗೇಜ್ ನಲ್ಲಿ ಇದ್ದವು ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login