LATEST NEWS
ಮಲ್ಪೆ ಬಂದರಿನಲ್ಲಿ ಸ್ಕೂಟಿ ಸಮೇತ ನೀರಿಗೆ ಬಿದ್ದ ಮೀನುಗಾರನ ಶವ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ..!
ಉಡುಪಿ : ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೆಳ್ಳಂಬೆಳಗ್ಗೆ ಆಕಸ್ಮಿಕವಾಗಿ ಸ್ಕೂಟಿ ಸಮೇತ ನೀರಿಗೆ ಬಿದ್ದ ಮೀನುಗಾರನೊಬ್ಬನ ಶವವನ್ನು ಮೇಲಕ್ಕೆತಲಾಗಿದೆ.
ಆಪದ್ಭಾಂಧವ ಈಶ್ವರ್ ಮಲ್ಪೆ ಈ ಕಾರ್ಯಾಚರಣೆ ನಡೆಸಿದ್ದಾರೆ, ದ್ವಿ ಚಕ್ರ ವಾಹನದೊಂದಿಗೆ ಬಂದರಿಗೆ ಆಗಮಿಸಿದ್ದ ಮೀನುಗಾರ ನೀರಿಗೆ ಬಿದ್ದು ಮುಳುಗಡೆಗೊಂಡು ಕಣ್ಮರೆಯಾಗಿದ್ದರು. ನೀರಿಗೆ ಬಿದ್ದ ಮಾಹಿತಿ ತಿಳಿದು ತತ್‌ಕ್ಷಣ ಧಾವಿಸಿ ಬಂದ ಈಶ್ವರ್ ಮಲ್ಪೆ ನೀರಿಗೆ ಧುಮುಕಿ ಎಲ್ಲ ಕಡೆ ಜಾಲಾಡಿದರೂ ಆತನ ದೇಹ ಸಿಕ್ಕಿರಲಿಲ್ಲ. ಅದರೆ ಆತನ ಸ್ಕೂಟರ್ ಪತ್ತೆಯಾಗಿ ಹಗ್ಗದ ಸಹಾಯದಿಂದ ಮೇಲಕ್ಕೆತ್ತಲಾಯಿತು. ಇದೀಗ ಮೀನುಗಾರನ ಮೃತದೇಹ ಪತ್ತೆಯಾಗಿದ್ದು, ಶವವನ್ನು ಮೇಲಕ್ಕೆತ್ತಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.