KARNATAKA
‘ದೇಗುಲ ನಿರ್ಮಾಣಕ್ಕಿಂತ ಅದರ ರಕ್ಷಣೆಯೇ ದೊಡ್ಡ ಸವಾಲು’; ಪೇಜಾವರ ಶ್ರೀ
ಲಖನೌ: ದೇಗುಲವನ್ನು ನಿರ್ಮಾಣ ಮಾಡುವುಕ್ಕಿಂತ ಅದನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನ ಸದಸ್ಯರಾದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಲಖನೌದಲ್ಲಿ ಮಾತನಾಡಿದ ಅವರು ಭಾರತ ಶತಮಾನಗಳಿಂದ ಕಂಡ ಕನಸು ನನಸಾಗುತ್ತಿದೆಯಾದ್ರೂ ಜವಾಬ್ದಾರಿ ಮುಗಿಯಿತೆಂದು ಯಾರೂ ಅಂದುಕೊಳ್ಳಬಾರದು. ಮುಂದೆ ಎಷ್ಟು ವರ್ಷಗಳ ಕಾಲ ನಿರ್ಮಾಣಗೊಂಡ ದೇವಾಲಯ ಅದೇ ಸ್ವರೂಪದಲ್ಲಿರಲಿದೆ? ಮತ್ತು ಆ ದೇಗುಲಕ್ಕೆ ಯಾರೊಬ್ಬರೂ ಹಾನಿ ಮಾಡದಂತೆ ತಡೆಯುವುದು ಹೇಗೆ ಎಂಬುದು ನಮ್ಮ ಆಲೋಚನೆಯಾಗಿರಬೇಕು’ ಎಂದು ಅವರು ನುಡಿದಿದ್ದಾರೆ. ನಮ್ಮ ಮಕ್ಕಳು ಹಿಂದೂ ಧರ್ಮದಲ್ಲಿರುವವರೆಗೂ ಹಾಗೂ ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೂ ರಾಮ ಮಂದಿರ ಹಾಗೇ ಇರಲಿದೆ. ಬುದ್ಧನ ಮೂರ್ತಿ ನಾಶ ಮಾಡಿದ ಆಫ್ಗಾನಿಸ್ತಾನದ ಸ್ಥಿತಿಯನ್ನು ಊಹಿಸಿಕೊಳ್ಳಬಹುದು’ ಎಂದಿದ್ದಾರೆ. ನಾವು ಇಲ್ಲಿ ಶಾಶ್ವತವಾಗಿ ನೆಲೆಸಿರುವುದಿಲ್ಲ. ಆದರೆ ಬದುಕಿರುವಾಗ ಹಿಂದೂ ಹಾಗೂ ಸನಾತನ ಧರ್ಮವನ್ನು ನಮ್ಮ ಮಕ್ಕಳಿಗೆ ದಾಟಿಸಬೇಕು. ನಮ್ಮ ಸಂತತಿಗಳಿಗೆ ಸಂಸ್ಕೃತಿಯನ್ನು ದಾಟಿಸುವ ಮೂಲಕ ಧರ್ಮವನ್ನು ಉಳಿಸಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.-