ಮಂಗಳೂರು ಜನವರಿ 09: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ, ಆದರೆ ಇದೀಗ ಆಕಾಲಿಕ ವಾಗಿ ಜನವರಿ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಿದ್ದು, ಸೋಮವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ.

ಸೋಮವಾರ ಮುಂಜಾನೆ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಯಾಗಿತ್ತು, ಬಳಿಕ ಮಂಗಳವಾರ ಕೂಡ ಌಡೀ ದಿನ ಮೋಡ ಕವಿದ ವಾತಾವರಾಣವಿತ್ತು, ರಾತ್ರೀ ವೇಳೆ ಗುಡುಗು ಸಿಡಿಲಿನಿಂದ ಕೂಡದ ಮಳೆಯಾಗಿದೆ. ಇಂದು ಕೂಡ ಌಡೀ ದಿನ ಮೊಡ ಕವಿದ ವಾತಾವರಣವಿತ್ತು, ಸಂಜೆಯಾಗುತ್ತಲೇ ಭಾರಿ ಮಳೆ ಸುರಿಯಲಾರಂಭಿಸಿದ್ದು, ವಾಹನ ಸವಾರರು ಸಂಕಷ್ಟಪಡುಂತಾಗಿದೆ.


ಮಳೆಗಾಲದಲ್ಲಿ ಕರಾವಳಿಗೆ ಬಾರದ ಮಳೆ ಈ ಬಾರಿ ಜನವರಿಯಲ್ಲಿ ಅಕಾಲಿಕವಾಗಿ ಮಳೆ ಬಂದಿದೆ. ಇನ್ನು ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.