LATEST NEWS
ಮಹಾರಾಷ್ಟ್ರ – ನಿರ್ಮಾಣ ಹಂತದ ಕಟ್ಟಡದ ಲಿಪ್ಟ್ ಕುಸಿದು 6 ಮಂದಿ ದುರ್ಮರಣ

ಥಾಣೆ ಸೆಪ್ಟೆಂಬರ್ 10: ಮಹಾರಾಷ್ಟ್ರದ ಥಾಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ ಕುಸಿದು ಕನಿಷ್ಠ ಆರು ಜನರು ಸಾವನ್ನಪ್ಪಿದ ಘಟನೆ ನಡೆದಿದೆ.
ಥಾಣೆಯ ಬಾಲ್ಕಮ್ ಪ್ರದೇಶದಲ್ಲಿ 40 ಅಂತಸ್ತಿನ ರುನ್ವಾಲ್ ಐರೆನ್ ಕಟ್ಟಡದಿಂದ ಲಿಫ್ಟ್ ಕುಸಿದು ಆರು ಮಂದಿ ಸಾವನಪ್ಪಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಬಾಲ್ಕಮ್‌ನ ನಾರಾಯಣಿ ಶಾಲೆಯ ಪಕ್ಕದಲ್ಲಿ ಇತ್ತೀಚೆಗೆ ಪೂರ್ಣಗೊಂಡ 40 ಅಂತಸ್ತಿನ ರನ್‌ವಾಲ್ ಐರೀನ್ ಕಟ್ಟಡದ ಮೇಲ್ಛಾವಣಿಯಲ್ಲಿ ವಾಟರ್ ಪ್ರೂಫ್ ಕೆಲಸ ಮಾಡುವಾಗ ಅಪಘಾತ ಸಂಭವಿಸಿದೆ. ಕಾರ್ಮಿಕರು ತಮ್ಮ ಕೆಲಸ ಮುಗಿಸಿ ಕೆಳಗಿಳಿಯುತ್ತಿದ್ದಾಗ ಲಿಫ್ಟ್‌ನ ಹಗ್ಗ ತುಂಡಾಗಿದೆ. ಈ ಅಪಘಾತದಲ್ಲಿ ಆರು ಕಾರ್ಮಿಕರು ಸ್ಥಳದಲ್ಲೇ ದುರಂತವಾಗಿ ಸಾವನ್ನಪ್ಪಿದರು, ಇಬ್ಬರು ಗಂಭೀರವಾಗಿ ಗಾಯಗೊಂಡ ಕಾರ್ಮಿಕರನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.