ಬೆಳ್ತಂಗಡಿ ಸೆಪ್ಟೆಂಬರ್ 10: ಕಾಡಾನೆಯೊಂದು ತೋಟಕ್ಕೆ ದಾಳಿ ಮಾಡಿದ ಪರಿಣಾಮ ತೋಟದಲ್ಲಿದ್ದ ಅಡಿಕೆ ತೆಂಗಿನ ಮರಗಳು ಧ್ವಂಸವಾದ ಘಟನೆ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದೆ.

ಪತ್ತಿಮಾರಿನ ರಾಘವೇಂದ್ರ ಅಭ್ಯಂಕರ್ ಅವರ ತೋಟಕ್ಕೆ ಶನಿವಾರ ತಡರಾತ್ರಿ ಕಾಡಾನೆ ದಾಳಿ ಮಾಡಿ ಫಸಲು ಬರುವ ಹತ್ತು ತೆಂಗಿನ ಮರ, 40 ಅಡಿಕೆಮರ ಹಾಗೂ ಬಾಳೆಗಿಡಗಳನ್ನು ದ್ವಂಸ ಮಾಡಿದೆ. ಶಿಶಿಲ, ಶಿಬಾಜೆ ಮತ್ತು ಅರಸಿನಮಕ್ಕಿ ಪ್ರದೇಶದಲ್ಲಿ ಕಾಡಾನೆಗಳು ಆಗಾಗ ಬಂದು ಕೃಷಿಗೆ ಹಾನಿ ಮಾಡುತ್ತಿವೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.