Connect with us

FILM

ಐಸಿ 814 ವೆಬ್ ಸರಣಿಯಲ್ಲಿ ಟೆರರಿಸ್ಟ್ ಗಳ ಹೆಸರು ಚೆಂಜ್ – ಒತ್ತಡಕ್ಕೆ ಮಣಿದ ನೆಟ್​ಫ್ಲಿಕ್ಸ್​, ಭಯೋತ್ಪಾದಕರ ಹೆಸರು ನಮೂದು

ಬೆಂಗಳೂರು ಸೆಪ್ಟೆಂಬರ್ 03: ಕಂದಹಾರ್ ನಲ್ಲಿ ನಡೆದ ವಿಮಾನ ಅಪಹರಣದ ಕುರಿತಂತೆ ಬಂದಿರುವ ವೆಬ್ ಸರಣಿ ಐಸಿ 814 ನಲ್ಲಿ ಭಯೋತ್ಪಾದಕರ ಹೆಸರನ್ನು ಬದಲಾಯಿಸಿದ ಕುರಿತಂತೆ ವಿವಾದ ಎದ್ದಿದ್ದು, ಇದೀಗ ಕೇಂದ್ರ ಸರಕಾರ ಮದ್ಯ ಪ್ರವೇಶದ ಬಳಿಕ ಭಯೋತ್ಪಾದಕರ ಹೆಸರನ್ನು ಇದೀಗ ಸಿನೆಮಾದಲ್ಲಿ ಪ್ರದರ್ಶಿಸಲಾಗುತ್ತಿದೆ.


ವಿಜಯ್ ವರ್ಮಾ, ನಾಸಿರುದ್ಧೀನ್ ಶಾ, ಪಂಕಜ್ ಕಪೂರ್ ಸೇರಿದಂತೆ ಕೆಲ ಜನಪ್ರಿಯ ನಟರು ನಟಿಸಿರುವ ‘ಐಸಿ 814’ ವೆಬ್ ಸರಣಿಯಲ್ಲಿ ಭಯೋತ್ಪಾಕರ ಪರ ಸಿಂಪತಿ ಮೂಡುವಂತೆ ಚಿತ್ರಿಸಲಾಗಿದೆ ಮಾತ್ರವಲ್ಲದೆ ಕೆಲವು ಸತ್ಯಗಳನ್ನು ಬೇಕೆಂದೇ ಮೆದುಗೊಳಿಸಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಭಯೋತ್ಪಾದಕರ ನಿಜ ಹೆಸರನ್ನೇ ಮರೆಮಾಚಿ ನಕಲಿ ಹೆಸರನ್ನು ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ವೆಬ್ ಸರಣಿಯನ್ನು ಹಿಂಪಡೆಯಬೇಕೆಂಬ ಒತ್ತಾಯವೂ ಜೋರಾಗಿ ಕೇಳಿ ಬಂದಿತ್ತು. ಇದೀಗ ನೆಟ್​ಫ್ಲಿಕ್ಸ್​ ವೆಬ್ ಸರಣಿಯಲ್ಲಿ ಭಯೋತ್ಪಾದಕರ ಹೆಸರನ್ನು ಪ್ರದರ್ಶಿಸಲು ಆರಂಭಿಸಿದೆ.

ವೆಬ್ ಸರಣಿಯಲ್ಲಿ ಅಪಹರಣಕಾರರ ಪಾತ್ರಗಳಿಗೆ ಶಂಕರ್ ಮತ್ತು ಭೋಲಾ ಎಂಬ ನಕಲಿ ಹೆಸರುಗಳನ್ನು (ಕೋಡ್​ನೇಮ್) ಗಳನ್ನು ಬಳಸಲಾಗಿದೆ. ವೆಬ್ ಸರಣಿಯ ಯಾವುದೇ ಹಂತದಲ್ಲಿಯೂ ಅವರ ನಿಜವಾದ ಹೆಸರನ್ನು ಹೇಳಲಾಗಿಲ್ಲ. ಇದೀಗ ಅಪಹರಣಕಾರರ ನಿಜವಾದ ಹೆಸರುಗಳನ್ನು ವೆಬ್​ ಸರಣಿಯ ಆರಂಭದಲ್ಲಿ ತೋರಿಸಲಾಗಿದೆ.

ಭಯೋತ್ಪಾದಕರಾದ ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜೂಹುರ್ ಇಬ್ರಾಹಿಂ, ಶಾಖಿರ್, ಶಾಹಿದ್ ಅಖ್ತರ್ ಶಯೀದ್, ಇಬ್ರಾಹಿಂ ಅಥರ್ ಅವರುಗಳು ವಿಮಾನವನ್ನು ಅಪಹರಣ ಮಾಡಿದ್ದರು. ಇದೀಗ ಇವರ ಹೆಸರುಗಳನ್ನು ವೆಬ್ ಸರಣಿಯ ಆರಂಭದಲ್ಲಿ ಪ್ರದರ್ಶಿಸಲಾಗುತ್ತಿದೆ. ನೆಟ್​ಫ್ಲಿಕ್ಸ್​ ಇಂಡಿಯಾದ ಕಂಟೆಂಟ್ ವೈಸ್ ಪ್ರೆಸಿಡೆಂಟ್ ಮೋನಿಕಾ ಶೇರ್ಗಿಲ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘1999 ರ ವಿಮಾನ ಅಪಹರಣದ ಬಗ್ಗೆ ಮಾಹತಿ ಇಲ್ಲದವ ಪ್ರೇಕ್ಷಕರ ಅನುಕೂಲಕ್ಕಾಗಿ ನಾವು ಭಯೋತ್ಪಾದಕರ ನಿಜ ಹೆಸರಿನ ಜೊತೆಗೆ ಅವರ ಕೋಡ್​ ನೇಮ್​ಗಳನ್ನು ಸಹ ಪ್ರದರ್ಶಿಸುತ್ತಿದ್ದೇವೆ. ಕೋಡ್​ ನೇಮ್​ಗಳು ನಿಜವಾದ ಆಪರೇಷನ್​ನಲ್ಲಿ ಬಳಸಲಾಗಿತ್ತು’ ಎಂದು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *