Connect with us

LATEST NEWS

ವೃತ್ತಿ ಬದುಕಿಗೆ ವಿದಾಯ ಹೇಳಿದ ಟೆನಿಸ್ ತಾರೆ ಸಾನಿಯಾ!

ನವದೆಹಲಿ, ಜನವರಿ 19: ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಯನ್ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಭಾಗವಹಿಸಿದ ಸಾನಿಯಾ ಮೊದಲ ಸುತ್ತಿನಲ್ಲಿಯೇ ಸೋಲು ಅನುಭವಿಸಿದರು.

ಈ ಸೋಲಿನ ಬಳಿಕ ಸಾನಿಯಾ ಮಿರ್ಜಾ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಬಗ್ಗೆ ಮಾತನಾಡಿದ್ದಾರೆ. 2022ರ ಟೆನಿಸ್ ಸೀಸನ್ ನನ್ನ ಕೊನೇಯ ಋತುವಾಗಿರಲಿದೆ. ಈ ಋತುವನ್ನು ಸಂಪೂರ್ಣಗೊಳಿಸಿದ ಬಳಿಕ ನಿವೃತ್ತರಾಗುವುದಾಗಿ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

ಭಾರತೀಯ ಟೆನಿಸ್ ಲೋಕದ ಸೂಪರ್‌ಸ್ಟಾರ್ ಆಗಿ ಮಿಂಚಿದ ಹೈದರಾಬಾದ್ ಮೂಲದ ಸಾನಿಯಾ, ಭಾರತದ ಪರವಾಗಿ ಅನೇಕ ಗ್ರ್ಯಾಂಡ್‌ ಸ್ಲ್ಯಾಮ್‌ಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾನಿಯಾ ಮಿರ್ಜಾ ಅವರ ಈ ಸಾಧನೆಯಿಂದಾಗಿ ಕೇವಲ ಟೆನಿಸ್ ಲೋಕದ ಸೂಪರ್ ಸ್ಟಾರ್ ಆಗಿ ಮಾತ್ರವೇ ಮೆರೆಯಲಿಲ್ಲ. ತಮ್ಮ ಸೌಂದರ್ಯದಿಂದಲೂ ಸಾನಿಯಾ ಹೆಚ್ಚು ಸದ್ದು ಮಾಡಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *