LATEST NEWS
ದೇವಸ್ಥಾನದೊಳಗೆ ನೇಣಿಗೆ ಶರಣಾದ ವ್ಯಕ್ತಿ..ವಾರದೊಳಗೆ ಎರಡನೇ ಪ್ರಕರಣ

ಮಂಗಳೂರು ಮಾರ್ಚ್ 10: ಆತ್ಮಹತ್ಯೆಗೆ ಈಗ ದೇವಸ್ಥಾನಗಳನ್ನು ಬಳಸುವ ಪ್ರವೃತ್ತಿ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದು, ಕೋಟತಟ್ಟು ಪಡುಕರೆ ನಿವಾಸಿ ಚೆನೈಯ್ಯ ಪೂಜಾರಿ (51) ಎಂಬಾತ ಮನೆಯ ಸಮೀಪವಿರುವ ಶಿರಸಿ ಮಾರಿಕಾಂಬ ಅಮ್ಮನವರ ದೇವಳದ ಬಾವಿಯೊಳಗೆ ಬಾವಿಯ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆಯ ಸಮುದ್ರ ಕಿನಾರೆಯಲ್ಲಿ ಬೀಡಾ ಅಂಗಡಿ ಇರಿಸಿಕೊಂಡು ಜೀವನಸಾಗಿಸುತ್ತಿದ್ದ ಇತ ಬುಧವಾರ ಮುಂಜಾನೆ ಬಾವಿಯ ಹಗ್ಗವನ್ನು ಬಳಸಿ ದೇವಸ್ಥಾನದ ಒಳಗೆ ನೇಣಿಗೆ ಶರಣಾಗಿದ್ದಾನೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ .ಕೋಟ ಪೊಲಿಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ದೇವಸ್ಥಾನದಲ್ಲಿ ನೇಣಿಗೆ ಶರಣಾಗುತ್ತಿರುವ ಎರಡನೇ ಪ್ರಕರಣ ಇದಾಗಿದ್ದು, ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು ದೇವಳದ ಶ್ರದ್ಧಾ ಭಕ್ತಿಗೆ ಕುಂದುತರುವ ಪ್ರಕರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.