Connect with us

    LATEST NEWS

    ಯಕ್ಷಗಾನದ ಸಂದರ್ಭ ಮೊಬೈಲ್ ಬಳಸುತ್ತಿದ್ದ ಮಕ್ಕಳಿಗೆ ಎಚ್ಚರಿಕೆ ನೀಡಿದ ಪಾತ್ರಧಾರಿ

    ಉಡುಪಿ ಮಾರ್ಚ್ 10: ಯಕ್ಷಗಾನದ ಸಂದರ್ಭ ರಂಗಸ್ಥಳದ ಮುಂದೆ ಕುಳಿತು ಮೊಬೈಲ್ ಬಳಸುತ್ತಿದ್ದ ಮಕ್ಕಳನ್ನು ಯಕ್ಷಗಾನ ಪಾತ್ರಧಾರಿಯೇ ಹಿಂದೆ ಹೋಗಿ ಮಾತನಾಡಿ ಎಂದು ಎಚ್ಚರಿಸಿದ ಘಟನೆ ನಡೆದಿದ್ದು, ಈ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭಗಳಲ್ಲಿ ಮೊಬೈಲ್ ಬಳಕೆ ಕೆಲವೊಮ್ಮೆ ಸಾಕಷ್ಟು ಕಿರಿಕಿರಿ ಮಾಡುತ್ತೆ. ಅಲ್ಲಿ ಏನು ನಡೆಯುತ್ತದೆ ಅನ್ನುವುದನ್ನೂ ತಿಳಿಯದೆ ಕೆಲವರು ಜೋರಾದ ಶಬ್ದ ಇಟ್ಟು ಮೊಬೈಲ್ ಬಳಸ್ತಾರೆ. ಅದರಲ್ಲೂ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ಎಲ್ಲರೂ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಮೊಬೈಲ್ ನ ಕರ್ಕಶ ಧ್ವನಿ ರಸಭಂಗಕ್ಕೆ ಕಾರಣವಾಗುತ್ತದೆ. ಇಂತಹುದೇ ಒಂದು ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


    ಕುಂದಾಪುರ ಸಮೀಪ ನಡೆದ ಯಕ್ಷಗಾನದಲ್ಲಿ ಪಾತ್ರಧಾರಿಗಳು ಸಂಭಾಷಣೆಯಲ್ಲಿ ನಿರತರಾಗಿದ್ದಾಗ ಎದುರು ಸಾಲಿನಲ್ಲಿ ಕುಳಿತ ಮಕ್ಕಳು ಮೊಬೈಲ್ ನಲ್ಲಿ ಆಟಾಡುತ್ತಾ ಕಿರಕಿರಿ ಮಾಡಿದ್ದಾರೆ. ಇದನ್ನು ಗಮನಿಸಿ ಸಹನೆ ಕಳಕೊಂಡ ಕಲಾವಿದ ವೇದಿಕೆಯಿಂದಲೇ ಮೊಬೈಲ್ ನೋಡೋದಾದ್ರೆ ಹಿಂದೆ ಹೋಗಿ ಅಂತ ಎಚ್ಚರಿಕೆ ನೀಡಿದ್ದಾನೆ. ಈ ಘಟನೆಗೆ ಸಾಕಷ್ಟು ಯಕ್ಷಾಭಿಮಾನಿಗಳು ಉತ್ತಮ ಸ್ಪಂದನೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply