Connect with us

    BELTHANGADI

    ಬೆಳ್ತಂಗಡಿ – ನೇಣಿಗೆ ಶರಣಾದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ವಿಜಯ್ ಭಟ್

    ಬೆಳ್ತಂಗಡಿ ಮೇ 05: ದೇವಸ್ಥಾನದ ಅರ್ಚಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ನಡೆದಿದೆ.


    ಮೃತರನ್ನು 29 ವರ್ಷ ಪ್ರಾಯದ ಶಿರಸಿ ಮೂಲದ ವಿಜಯ ಭಟ್ ಎಂದು ಗುರುತಿಸಲಾಗಿದ್ದು, ಇವರು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದು, ದೇವಸ್ಥಾನದ ಹಿಂಭಾಗದಲ್ಲಿ ತಾನು ವಾಸವಾಗಿದ್ದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಅಲ್ಲದೇ ಅವರಿಗೆ ಮೂರು ತಿಂಗಳ ಮಗು ಕೂಡ ಇದ್ದು, ಅವರು ತಮ್ಮ ರೂಮಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ದೇವಸ್ಥಾನಕ್ಕೆ ಎಂದಿನಂತೆ ಭಕ್ತರು ಪೂಜೆಗಾಗಿ ಬಂದಾಗ ಅರ್ಚಕರು ಮಾತ್ರ ಬಂದಿರಲಿಲ್ಲ. ಕ್ಷೇತ್ರಕ್ಕೆ ಬಂದ ಭಕ್ತರು ಕಾದು ಕೊನೆಗೆ ಅರ್ಚಕರನ್ನು ಕರೆಯಲು ಅವರ ರೂಮಿನ ಬಳಿ ಹೋದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಈಗ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *