LATEST NEWS
ಬಿಸ್ಲೇರಿ ಬಾಟಲ್ ಗೆ ಕೈ ಹಾಕಿದ ಟಾಟಾ….!!

ಮುಂಬೈ ನವೆಂಬರ್ 24: ದೇಶದ ಬಹುದೊಡ್ಡ ಮಿನರಲ್ ವಾಟರ್ ಕಂಪೆನಿಯನ್ನು ಟಾಟಾ ಗ್ರೂಪ್ ಖರೀದಿಸಲು ಮುಂದಾಗಿದೆ ಎಂಬ ವರದಿ ಬಂದಿದೆ. ಸುಮಾರು 6,000-7,000 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಈ ಮೂಲಕ ದೇಶದ ನಂಬರ್ 1 ಮಿನರಲ್ ವಾಟರ್ ಕಂಪನಿಯನ್ನು ಟಾಟಾ ಗ್ರೂಪ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ. ಕಳೆದ ಎರಡು ವರ್ಷಗಳಿಂದ ಟಾಟಾ ಗ್ರೂಪ್ ಮತ್ತು ಬಿಸ್ಲೇರಿ ನಡುವೆ ಒಪ್ಪಂದ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.
ರಿಲಯನ್ಸ್ ರಿಟೇಲ್, ನೆಸ್ಲೆ ಮತ್ತು ಡ್ಯಾನೋನ್ ಕಂಒನಿಗಳು ಕೂಡ, ಬಿಸ್ಲೇರಿಯನ್ನು ಖರೀದಿಸುವ ಇರಾದೆ ವ್ಯಕ್ತಪಡಿಸಿದ್ದವು. ಆದರೆ ಅಂತಿಮವಾಗಿ ಟಾಟಾ ಹೆಚ್ಚಿನ ಹಣ ನೀಡುವ ವಾಗ್ದಾನ ಮಾಡಿದ್ದರಿಂದ, ಬಿಸ್ಲೇರಿ ಈ ಖರೀದಿ ಒಪ್ಪಂದಕ್ಕೆ ಸೈ ಎಂದಿದೆ ಎಂಬ ಮಾತುಗಳು ಕೇಳಿ ಬಂದಿವೆ.

ವರದಿಗಳ ಪ್ರಕಾರ, ಕಳೆದ ಎರಡು ವರ್ಷಗಳಿಂದ ಟಾಟಾ ಗ್ರೂಪ್ ಮತ್ತು ಬಿಸ್ಲೇರಿ ನಡುವೆ ಒಪ್ಪಂದ ಮಾತುಕತೆಗಳು ನಡೆಯುತ್ತಿದ್ದು, 6,000-7,000 ಕೋಟಿ ರೂ.ಗೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಅಂತಿಮ ನೈಜ ಖರೀದಿ ಬೆಲೆಯನ್ನು ಎರಡೂ ಕಂಪನಿಗಳು ಇನ್ನಷ್ಟೇ ಘೋಷಿಸಬೇಕಿದೆ.