Connect with us

    DAKSHINA KANNADA

    ಬೈಕ್ ಮತ್ತು ರಿಕ್ಷಾ ನಡುವೆ ಅಪಘಾತ – ಕಾಲೇಜು ವಿಧ್ಯಾರ್ಥಿ ಸಾವು…!!

    ಬೆಳ್ತಂಗಡಿ ನವೆಂಬರ್ 24: ಬೈಕ್ ಮತ್ತು ರಿಕ್ಷಾ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿಧ್ಯಾರ್ಥಿ ಮೃತಪಟ್ಟಿರುವ ಘಟನೆ ಪಾರಂಕಿ ರಸ್ತೆಯ ನಡಿಬೆಟ್ಟು ಎಂಬಲ್ಲಿ ನಡೆದಿದೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿ ಪಾರಂಕಿ ಗ್ರಾಮದ ನಿವಾಸಿ ಶಿವಪ್ರಸಾದ್ (19) ಮೃತ ಬಾಲಕ.


    ಪಾರಂಕಿ ರಸ್ತೆಯ ನಡಿಬೆಟ್ಟು ಎಂಬಲ್ಲಿ ಅಟೋ ಮತ್ತು ದ್ವಿಚಕ್ರವಾಹನದ ನಡುವೆ ಈ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ವಿಧ್ಯಾರ್ಥಿಯನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿಯ ವೇಳೆ ಅವರು ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

    Share Information
    Advertisement
    Click to comment

    You must be logged in to post a comment Login

    Leave a Reply