Connect with us

    LATEST NEWS

    ಮಗನ ಕಾಲೇಜು ಫೀಸ್ ಗಾಗಿ ಬಸ್ ಅಡಿ ಬಿದ್ದು ಸಾವನಪ್ಪಿದ ತಾಯಿ….!!

    ಚೆನ್ನೈ ಜುಲೈ 18: ಮಗನ ಕಾಲೇಜ್ ಫೀಸ್ ಕಟ್ಟಲು ತಾಯಿಯೊಬ್ಬಳು ತನ್ನ ಜೀವವನ್ನೇ ಬಿಟ್ಟ ಘಟನೆ ಸೇಲಂ ನಲ್ಲಿ ವರದಿಯಾಗಿದೆ. ಅಪಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಹಿಳೆ ಹೆಸರು ತಿಳಿದು ಬಂದಿಲ್ಲ, ಇವರು ಸೇಲಂನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಮಗ ಕಾಲೇಜಿಗೆ ಹೋಗುತ್ತಿದ್ದು 45,000 ರೂಪಾಯಿ ಕಾಲೇಜು ಫೀಸ್​ ಕಟ್ಟಬೇಕೆಂದು ತಾಯಿ ಬಳಿ ಕೇಳಿದ್ದಾನೆ. ಹೀಗಾಗಿ ತಾಯಿ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಅವರಿವರ ಬಳಿ ಸಾಲ ಕೇಳಿದ್ದಾರೆ ಎನ್ನಲಾಗಿದೆ.

    ಆದರೆ ಯಾರೂ ಹಣ ನೀಡಿಲ್ಲ, ಈ ಹಿನ್ನಲೆ ಅಪಘಾತದಲ್ಲಿ ಸಾವನಪ್ಪಿದರೆ ಸರಕಾರ ಹಣ ನೀಡುತ್ತೆ ಅಂತ ಯಾರೋ ಹೇಳಿದ ಮಾತು ಕೇಳಿ ಮಹಿಳೆ ವೇಗವಾಗಿ ಬರುತ್ತಿದ್ದ ತಮಿಳು ನಾಡು ಸಾರಿಗೆ ಬಸ್​ ಮುಂದೆ ಸಡನ್​ ಆಗಿ ಅಡ್ಡ ಬಂದಿದ್ದಾರೆ. ಇದರಿಂದ ಬಸ್​ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
    ಸದ್ಯ ಮಹಿಳೆ ಬಸ್​ಗೆ ಅಡ್ಡ ಹೋಗಿ ಸಾವನ್ನಪ್ಪುವ ಸಿಸಿಟಿವಿ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *