Connect with us

LATEST NEWS

ಮಲ್ಪೆ – ಮೀನುಗಾರಿಕಾ ದೋಣಿ ಮುಳುಗಡೆ – ಮೀನುಗಾರರ ರಕ್ಷಣೆ

Share Information

ಉಡುಪಿ ಜುಲೈ 18: ಸಮುದ್ರದ ಅಲೆಗಳ ಅಬ್ಬರಕ್ಕೆ ಅರಬ್ಬೀ‌ ಸಮುದ್ರದಲ್ಲಿ ಮಲ್ಪೆಯ ಆಳ ಸಮುದ್ರ ದೋಣಿಯೊಂದು ಮುಳುಗಡೆಯಾಗಿದೆ. ದೋಣಿಯಲ್ಲಿ ನಾಲ್ವರು ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.


ಮಂಗಳೂರು ಮೂಲದ ಜೈಸನ್ ಲೋಬೋ ಮಾಲಕತ್ವದ ಕ್ವೀನ್ ಮೇರಿ ಹೆಸರಿನ ದೋಣಿ ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆದು ವಾಪಾಸ್ ಮಂಗಳೂರಿಗೆ ಬರಲು ಪ್ರತಿಕೂಲ ಹವಾಮಾನ ಇದ್ದ ಕಾರಣ ದೋಣಿ ಉಡುಪಿ ಮಲ್ಪೆ ಬಂದರಿಗೆ ಬರುವಾಗ ಈ ದುರಂತ ಸಂಭವಿಸಿದೆ.


ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ದೋಣಿಯ ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರು ನಾಲ್ವರು ಜನ ಮೀನುಗಾರರ ರಕ್ಷಣೆ ಮಾಡಿದ್ದಾರೆ. 5 ಲಕ್ಷದ ಮೀನು ಮತ್ತು ದೋಣಿ ಸೇರಿ 15 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು , ಅಪತ್‌ ಭಾಂದವ ಈಶ್ವರ್ ರಕ್ಷಣಾ ಕಾರ್ಯದಲ್ಲಿ ತಮ್ಮ ಸಹಾಯವನ್ನು ಒದಗಿಸಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply