Connect with us

National

ತಮಿಳ್ನಾಡಿನಲ್ಲಿ ಲಕ್ಷ ದಾಟಿದ ಸೋಂಕಿತರು, ಚೆನ್ನೈ, ಮಧುರೈ ಇನ್ನೂ ಲಾಕ್ !!

ಚೆನ್ನೈ , ಜೂನ್ 4 : ದೇಶದಲ್ಲಿ ಕೊರೊನಾ ಮಹಾಮಾರಿಗೆ ನಲುಗಿ ಹೋಗಿರುವ ಎರಡನೇ ರಾಜ್ಯವಾಗಿರುವ ತಮಿಳ್ನಾಡಿನಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಶುಕ್ರವಾರ ಒಂದೇ ದಿನ 4329 ಹೊಸ ಪ್ರಕರಣಗಳು ಪಾಸಿಟಿವ್ ಆಗಿದ್ದು ರಾಜ್ಯದಲ್ಲಿ 1,02,721 ಸೋಂಕು ಪೀಡಿತರಿದ್ದಾರೆ.


ಶುಕ್ರವಾರ 64 ಮಂದಿ ಕೊರೊನಾಗೆ ಬಲಿಯಾಗಿದ್ದು ತಮಿಳ್ನಾಡಿ‌ನಲ್ಲಿ ಒಟ್ಟು 1385 ಮಂದಿ ಸಾವು ಕಂಡಿದ್ದಾರೆ. ಆಶಾದಾಯಕ ವಿಚಾರ ಅಂದರೆ ರಾಜ್ಯದಲ್ಲಿ ಈವರೆಗೆ 58,378 ಮಂದಿ ಕೊರೊನಾ ಮುಕ್ತರಾಗಿ ಹೊರಬಂದಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 62 ರಷ್ಟು ಕೇಸು ಚೆನ್ನೈ ನಗರ ಒಂದರಲ್ಲೇ ವರದಿಯಾಗಿದ್ದು , ಶುಕ್ರವಾರ ಒಂದೇ ದಿನ 33 ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ.


ಸೋಂಕು ವ್ಯಾಪಕವಾಗಿ ಹರಡುತ್ತಿರುವ ಚೆನ್ನೈ ಮತ್ತು ಮಧುರೈನಲ್ಲಿ ಲಾಕ್ ಡೌನ್ ಮುಂದುವರಿದಿದ್ದು ಇತರೇ ಜಿಲ್ಲೆಗಳಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ, ರಾಜ್ಯ ಸರಕಾರ ಅತಿ ವೇಗದ ತಪಾಸಣೆಗಾಗಿ ರಾಜ್ಯಾದ್ಯಂತ ಅಲ್ಲಲ್ಲಿ ಫೀವರ್ ಕ್ಲಿನಿಕ್ ಗಳನ್ನು ತೆರೆದಿದ್ದು ಈವರೆಗೆ 12 ಲಕ್ಷಕ್ಕಿಂತಲೂ ಹೆಚ್ಚು ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಹೀಗಿದ್ದರೂ ತಮಿಳ್ನಾಡು ಸರಕಾರ ಮಾತ್ರ ಸೋಂಕು ಸಮುದಾಯಕ್ಕೆ ಹರಡಿದೆ ಎನ್ನುವುದನ್ನು ಒಪ್ಪಿಕೊಳ್ತಿಲ್ಲ..

Facebook Comments

comments