Connect with us

LATEST NEWS

ತಾಲೂಕು ಮಟ್ಟದಲ್ಲಿ 6 ದಿನ ಆಧಾರ್ ಅದಾಲತ್

ತಾಲೂಕು ಮಟ್ಟದಲ್ಲಿ 6 ದಿನ ಆಧಾರ್ ಅದಾಲತ್

ಮಂಗಳೂರು ಜುಲೈ 13: ಆಧಾರ್ ನೋಂದಣಿಗಾಗಿ ಸಾರ್ವಜನಿಕರು ಜಿಲ್ಲೆಯ ವಿವಿಧ ಕಚೇರಿಯಲ್ಲಿ ಇನ್ನೂ ನೋಂದಣಿಯಾಗದೆ ಇರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಲ್ಲೆಯ ತಾಲೂಕು ಮಟ್ಟದಲ್ಲಿ 6 ದಿನಗಳ ಕಾಲ ಆಧಾರ್ ಅದಾಲತ್‍ನ್ನು ಆಯೋಜಿಸಲಾಗಿದೆ.

ಜುಲೈ 16 ರಿಂದ 21 ರವರೆಗೆ ಬಂಟ್ವಾಳ ತಾಲೂಕು ಪಂಚಾಯತ್ ಬಳಿ ಸಾಮರ್ಥ್ಯ ಸೌಧ, ಜುಲೈ 23 ರಿಂದ 28 ರವರೆಗೆ ಬೆಳ್ತಂಗಡಿ ತಾಲೂಕು ಕಚೇರಿಯ ಹಳೆ ಕಟ್ಟಡ, ಜುಲೈ 30 ರಿಂದ ಆಗಸ್ಟ್ 4 ರವರೆಗೆ ಸಮುದಾಯ ಭವನ ಪುತ್ತೂರು, ಆಗಸ್ಟ್ 6 ರಿಂದ 11 ರವರೆಗೆ ಸುಳ್ಯ ತಾಲೂಕು ಕಚೇರಿ ಪಡಸಾಲೆಯಲ್ಲಿ ಆಯೋಜಿಸಲಾಗಿದೆ.

ಈ ಅದಾಲತ್‍ನಲ್ಲಿ ನೋಂದಣಿಗಾಗಿ ಬರುವ ಸಾರ್ವಜನಿಕರು ಎಲ್ಲಾ ಪೂರಕ ದಾಖಲೆಗಳೊಂದಿಗೆ ಹಾಜರಾಗಿ ಆಧಾರ್‍ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಪ್ರಕಟಣೆ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *