DAKSHINA KANNADA
ಸಿಎಎ ವಿರುದ್ದದ ಪ್ರತಿಭಟನಾಕಾರರ ವಿರುದ್ದ ಕ್ರಮಕ್ಕೆ ಆಗ್ರಹ

ಸಿಎಎ ವಿರುದ್ದದ ಪ್ರತಿಭಟನಾಕಾರರ ವಿರುದ್ದ ಕ್ರಮಕ್ಕೆ ಆಗ್ರಹ
ಮಂಗಳೂರು ಜನವರಿ 28: ಕಾಶ್ಮೀರಿ ಪಂಡಿತರನ್ನು ಆದಷ್ಟು ಕೂಡಲೇ ಕಾಶ್ಮೀರಕ್ಕೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಬೇಕು ಹಾಗೂ ಸಿಎಎ ವಿರುದ್ಧ ನಡೆಸುತ್ತಿರುವ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದು ಜನಜಾಗೃತಿ ವೇದಿಕೆ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಿತು.
ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಿಂದ ಹೊರದಬ್ಬಿ ವರ್ಷಗಳೇ ಕಳೆದರೂ , ಇಂದೂ ಕೂಡಾ ಆ ಕುಟುಂಬಗಳು ನಿರಾಶ್ರಿತರಾಗಿಯೇ ಬದುಕುತ್ತಿದ್ದಾರೆ. ಕೇಂದ್ರ ಸರಕಾರ ಕೂಡಲೇ ಆ ಕುಟುಂಬಗಳನ್ನು ಕಾಶ್ಮೀರಕ್ಕೆ ಮತ್ತೆ ಸೇರಿಸಬೇಕು.

ದೇಶದೆಲ್ಲೆಡೆ ಸಿಎಎ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ದೇಶದ್ರೋಹಿ ಶಕ್ತಿಗಳು ಹಾಗೂ ಕೆಲವು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದು, ಇವರ ಮೇಲೆ ಕ್ರಮ ಜರುಗಿಸಬೇಕೆಂದೂ ಪ್ರತಿಭಟನಾಕಾರರು ಒತ್ತಾಯಿಸಿದರು.