ಸೈನಿಕ ಆ ಸಮವಸ್ತ್ರ ಧರಿಸಿ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಬೇಕೆಂಬ ಉತ್ಕಟ ಆಸೆ ಚಿಕ್ಕಪ್ರಾಯದಲ್ಲೇ ಮೂಡಿತ್ತು. ಅದಕ್ಕೆ ಕಾರಣವೇನೋ ಗೊತ್ತಿಲ್ಲ. ಗಡಿಯಲ್ಲಿ ನಿಂತು ಕಾಯಬೇಕು, ಅದೇ ಪರಮ ಧ್ಯೇಯ. ದಿನವೂ ಅಭ್ಯಾಸ .ಎರಡೆರಡು ಸಲ ಅವಕಾಶ ಕಳೆದುಕೊಂಡರು...
ಅಪ್ಪನ ಮಾತು “ಲೋ, ಏನೋ ಸ್ವರ ಏರುತ್ತಿದೆ. ನಾನು ನಿನ್ನಪ್ಪ ನೆನಪಿರಲಿ ..ಮೀಸೆ ದಪ್ಪಗಾದ ಹಾಗೆ ಸ್ವರ ಏರುಗತಿಯಲ್ಲಿ ಅಧಿಕಾರ ಚಲಾಯಿಸುವ ಹಾಗೆ ಕಾಣುತ್ತಿದೆ. ಏನು ನಿಂಗೆ ಆಸ್ತಿ ಮಾಡಿಡಬೇಕಾ? ಅಲ್ಲ ನಾನು ಮಾಡಿದ್ರೆ ನಿಂಗೇನ್...
ಮಾತುಕತೆ “ಲೇ, ದೀಪು ಎಷ್ಟು ಸಲ ಹೇಳೋದು ನಿನಗೆ ಊಟ ಮಾಡುವಾಗ ಮೊಬೈಲ್ ಯೂಸ್ ಮಾಡಬೇಡ ಅಂತ, ಮಾತೇ ಕೇಳೋದಿಲ್ಲ ಅಲ್ವಾ?”. “ಏನಮ್ಮಾ ನಿಂದು, ನಾನು ಊಟ ಮಾಡುತ್ತಿದ್ದೇನೆ ತಾನೆ !,ಹೇಗೆ ತಿಂದರೂ ಹೊಟ್ಟೆಗೆ ತಾನೆ...
ಬೋಗಿ ಪಯಣ ಸಾಗುತ್ತಿದೆ. ರೈಲಿನ ಬೋಗಿಗಳ ಕುಲುಕಾಟ ದೇಹಕ್ಕೊಂದು ಲಯವನ್ನು ನೀಡಿದೆ. ದೂರದಲ್ಲಿ ಕೇಳಿಬರುತ್ತಿರುವ ಚಾಯ್ ಚಾಯ್ ಮಧುರವಾಗಿದೆ. ಒಂದಿಷ್ಟು ಮಾತುಕತೆಗಳು ಕುತೂಹಲ ಹುಟ್ಟಿಸಿದೆ.ನಿದಾನವಾಗಿ ಕೇಳಿಸಿದ ಡೋಲಕ್ ನ ನಾದ. ಅದು ಮನ ಮುದಗೊಳಿಸುವ ನಾದವಲ್ಲ....
ಕತ್ತಲಿನ ಕತೆ ‘ಕತ್ತಲು’ ಯಾವಾಗಲೂ ರಾತ್ರಿಯಾಗುವುದನ್ನೇ ಕಾಯುತ್ತಿತ್ತು. ಬೆಳಗ್ಗಿನ ಜಂಜಾಟವನ್ನು ಕಳೆಯಬೇಕೆನ್ನುವ ದಾವಂತ ದಿನವೂ ಹುಟ್ಟುತ್ತಿತ್ತು. ಇತ್ತೀಚಿಗೆ ವಿಪರೀತ ಅನ್ನುವಷ್ಟರಮಟ್ಟಿಗೆ ಹೆಚ್ಚಾಗಿತ್ತು. ರಾತ್ರಿಗೆ ಕಾಯೋದು ,ಒಮ್ಮೆ ನಿಡಿದಾಗಿ ಉಸಿರು ಬಿಟ್ಟು ಅದನ್ನು ಆಸ್ವಾದಿಸುತ್ತಾ ಬೆಳಗಿನ ಬೆಳಕಿಗೆ...
ತಪ್ಪಲ್ಲವೇ? ಅಲ್ಲಿ ಮೇಲೆ ನಿಂತ ಚೈತನ್ಯ ಶಕ್ತಿ ಎನಂದುಕೊಳ್ಳುತ್ತಿದ್ದೀಯೋ ಗೊತ್ತಿಲ್ಲ. ಖಂಡಿತ ನೋವಾಗಿರುತ್ತೆ. ತಲೆಮೇಲೆ ಹೊತ್ತು ಮೆರೆಸಿದರು ಅರಿವಿನಿಂದಲೋ ಅಥವಾ ಗೊತ್ತಿಲ್ಲದೆಯೋ ಕಾಲಕಸ ಮಾಡಿರುವುದು ನೋವು ತರಿಸಿರುವುದು ಖಂಡಿತ .ಇಷ್ಟೆಲ್ಲ ಪೀಠಿಕೆ ಯಾಕೆಂದರೆ ನಾ ಬರುವ...
ಚಲನೆ “ಚಲನೆ ಇದ್ದರೆ ಮಾತ್ರ ಅಲ್ಲವೇ ಬದುಕು ಮತ್ತು ಅಭಿವೃದ್ಧಿ ಸಾಧ್ಯ. ಯಾವುದಾದರೂ ಆಗಬಹುದು ಸ್ಥಿರವಾಗಿದ್ದರೆ ಗತಿಸುತ್ತದೆ”. “ಇಲ್ಲ ನಾನಿದನ್ನು ಒಪ್ಪುವುದಿಲ್ಲ, ಮರ ನಿಂತಿರುವುದಿಲ್ಲವಾ? ಮನೆ ,ದೊಡ್ಡ ಕಂಬ, ದೇವಸ್ಥಾನ ,ಶಿಲಾಶಾಸನ ,ಅಣೆಕಟ್ಟು,ಇವೆಲ್ಲವೂ ನಿಂತಿರುವುದಲ್ಲವಾ?”. ”...
ಪ್ರಶ್ನೆ? ಪುಟ್ಟ ಪಾದದಲ್ಲಿ ಕಿರುಗೆಜ್ಜೆ ಧರಿಸಿ ಮನೆಯಲ್ಲಿ ಓಡಾಡುವವಳೇ ನನ್ನ ಮುದ್ದಿನ ತಂಗಿ ಭಕ್ತಿ. ಹೆಸರಿಗೆ ಅನ್ವರ್ಥದ ಹಾಗೆಯೇ ಎಲ್ಲದರಲ್ಲೂ ಭಕ್ತಿ ತುಸು ಹೆಚ್ಚೇ ಇದೆ. ಮುದ್ದಿನ ಕಣ್ಣೋಟ,ತೊದಲು ಮಾತಿನಿಂದ ಮನಸೆಳೆಯುವ ದೇವತೆ ಅವಳು. ಕೂಡು...
ನಂಬೋದ್ಯಾರನ್ನಾ ಇಲ್ಲಿ ತಪ್ಪು ಯಾರದ್ದು ಅನ್ನೋದು ಗೊತ್ತಿಲ್ಲ .ನನ್ನೊಳಗಿನ ‘ನಾನು’ ಅನ್ನುವವನು ಎಲ್ಲರನ್ನು ಒಂದೇ ತೆರದಿ ನೋಡುತ್ತಿದ್ದ. ಹಾಗೆ ವರ್ತಿಸುತ್ತಿದ್ದ. ಮನೆಯ ಜಗಲಿಯಲ್ಲಿ ದಿನವೂ ಮಲಗುವ ಜಿಮ್ಮಿಯನ್ನು, ಅಂಗಳದ ಹೂಗಿಡಗಳನ್ನು ,ಮಾರ್ಗ ಬದಿಯ ಮರವನ್ನು, ಹಂಚಿನ...
ಭಾವನೆ “ಮಾತು ಎಲ್ಲಿಂದ ಬಂದರು ಒಪ್ಪುವುದಾದರೆ ಪಡೆದುಕೋ” ಅಂತ ಸದಾಶಿವ ಸರ್ ಆಗಾಗ ಹೇಳ್ತಾಯಿದ್ರು ಹಾಗಾಗಿಯೇ ನಾನು ಅವನ ಮಾತನ್ನ ಕೇಳಿದ್ದು. ನನಗಿಂತ ಸಣ್ಣವ, ಹಾಗಂತ ನಾನೇನು ಎರಡು ಮಕ್ಕಳ ತಂದೆಯಲ್ಲ .ಅವನು ನನ್ನ ವಯಸ್ಸಿಗಿಂತ...