ಚಾಲಕ ಕಾಡನ್ನು ಭಾಗ ಮಾಡಿಕೊಂಡು ಸಾಗಿದ ರಸ್ತೆಯ ಮೇಲೆ ಬಸ್ಸು ಓಡುತ್ತಿತ್ತು. ಎತ್ತರದಿಂದ ನೋಡಿದರೆ ಹಸಿರು ಬಣ್ಣದ ನಡುವೆ ಬಿಳಿಬಣ್ಣವೊಂದು ಓಡಾಡಿದಂತೆ ಭಾಸವಾಗುತ್ತಿತ್ತು. ನಾನೀಗ ಹೇಳು ಘಟನೆ ಆ ಬಸ್ಸಿನ ಚಾಲಕನದು. ಅತ್ಯುತ್ಸಾಹಿ ಜೀವನ ಪಯಣಿಗ...
SOMEಗೀತ ಜನ ಮಲಗಿದ್ದರೂ ಊರು ಮಲಗಿರಲಿಲ್ಲ. ಅಲ್ಲಲ್ಲಿ ಬೆಳಕಿತ್ತು, ಕೆಲವೊಂದು ಚಕ್ರಗಳು ರಸ್ತೆ ಮೇಲೆ ಚಲಿಸುತ್ತಿದ್ದವು ,ನಾಯಿಗಳ ಸವಾರಿ ಆರಂಭವಾಗಿತ್ತು. ಅದೇನು ತಿರುವಿನಿಂದ ಕೂಡಿದ ಜಾಗವಲ್ಲ !.ಹೊಂಡ ಗುಂಡಿಯಿಲ್ಲ. ಅಲ್ಲಿ ಆತ ಗಾಡಿಯಿಂದ ಕೆಳಕ್ಕೆ ಬಿದ್ದ....
ಕಳೆದುಕೊಂಡೆ ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ ಮಾಡಿದ್ದಾರೆ ,ಆಗ...
ದುಸ್ತರ ನಾಲ್ಕು ಗೋಡೆಗಳನ್ನು ದಾಟಲೇ ಇಲ್ಲ ಸುದ್ದಿ. ಯಾಕಿರಬಹುದು? ಅದೇನು ರಸಬರಿತವಲ್ಲ! ಕಣ್ಣಗಲಿಸಿ ,ಕಿವಿಕೊಟ್ಟು ,ನಾಲಿಗೆ ಚಪ್ಪರಿಸಿ ಕೇಳುವ ಸುದ್ದಿಯಲ್ಲವಾದ ಕಾರಣ.ಬದುಕಿನ ಚಕ್ರ ಸಾಗುತ್ತಿತ್ತು ತಗ್ಗುದಿಣ್ಣೆಗಳನ್ನ, ಹೊಂಡ ಗುಂಡಿಗಳನ್ನ ನಿಭಾಯಿಸುತ್ತಾ ಸಾಗತ್ತಿದ್ದಾಗ ಕಂದಕವೊಂದು ಅಡ್ಡ ಬಂದಾಗಿತ್ತು...
ಬಿರುಕು ಅಂಗಳದಿ ಬೆಳೆದ ಗಿಡ ಹೆಮ್ಮರವಾಗಿ ನೆರಳು ಕೊಡುತ್ತಿದೆ .ಆದರೆ ಅದರ ಬೇರುಗಳು ಭೂಮಿಯೊಳಗಿಂದ ಸಾಗಿ ಮನೆಯ ಜಗಲಿ ಒಳಗಿಂದ ಹಾದು ಗೋಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿ ಮನೆಯ ನೆಲದಲ್ಲಿ ಬಿರುಕನ್ನು ಮೂಡಿಸಿ ಮನೆಯನ್ನು ಉರುಳಿಸಲು ಹವಣಿಸಿದೆ....
ಅತ್ಯಾಚಾರ ಸಾರ್ ಅತ್ಯಾಚಾರವಾಗುತ್ತಿದೆ !.ಇದನ್ನು ನಿಲ್ಲಿಸಿ. ಯಾರಿಗೂ ನನ್ನ ಮಾತು ಕೇಳಿಸ್ತಾ ಇಲ್ವಾ? ಅಥವಾ ನನಗೆ ಮಾತ್ರ ಹಾಗೆ ಅನಿಸ್ತಾ ಇದೆಯಾ ?.ಎಲ್ರೂ ಆಸ್ವಾದಿಸುತಿದ್ದಾರೆ ಅಂದರೆ, ಅವರು ವಿಕೃತ ವ್ಯಕ್ತಿಗಳಾ? ಅರ್ಥವಾಗ್ತಿಲ್ಲ. ಕಿರುಚಿ ಸ್ವರ ಬತ್ತಿಹೋಗಿದೆ....
ಹಾದಿ ಆ ಒಂದು ಘಟನೆ ನಡೆಯದೇ ಇದ್ದಿದ್ದರೆ ಆತ ಇಂದು ಪದವಿ ಶಿಕ್ಷಣ ಮುಗಿಸಿ ರಂಗಕಲೆಯೋ ಅಥವಾ ಔದ್ಯೋಗಿಕ ಕ್ಷೇತ್ರವನ್ನು ಅರಸಿ ಸಾಧನೆಯ ಹೆಜ್ಜೆ ಇಡಬೇಕಿತ್ತು. ಹೀಗಾಗಲೇ ಬೇಕೆಂದು ಬರೆದ ಮೇಲೆ ಯಾರೇನು ಮಾಡಕ್ಕಾಗುತ್ತೆ?. ಆ...
ಮಧ್ಯಮ ವರ್ಗ ಸಣ್ಣ ಸಂಧಿಯನ್ನು ದಾಟಿ ಆ ಮನೆಯನ್ನು ತಲುಪಬೇಕು. ಹಿರಿಯರಿಂದ ಬಂದ ಬಳುವಳಿಯೆಂದರೆ ಊರಿನ ನಡುವೆ ಹೆಸರು , ದೊಡ್ಡದೊಂದು ಮನೆ , ಜೊತೆಗೇ ಬದುಕುವ ಕುಟುಂಬ, ಮನೆ ಹುಡುಗನಿಗೆ ದೊಡ್ಡಪ್ಪ ಚಿಕ್ಕಪ್ಪ ಅಪ್ಪ-ಅಮ್ಮ...
ಇದ್ಯಾಕಪ್ಪ ಹೀಗೆ ಬಾಳೆಗೊನೆ ಚೆನ್ನಾಗಿ ಬಂದಿತ್ತು. ಮಾರಾಟಕ್ಕೆ ಪೇಟೆಗೆ ಹೊರಟೆ.ಮಕ್ಕಳಿಗೆ ಬೇರೆ ಬೇರೆ ಊರಲ್ಲಿ ಕೆಲಸ .ಕೃಷಿ ನನ್ನ ಕೆಲಸ. ಬೆಲೆ ಹೇಗಿದೆಯೋ ಗೊತ್ತಿಲ್ಲ. ಚೆನ್ನಾಗಿ ಸಿಗಬಹುದೆಂಬ ನಂಬಿಕೆಯಿಂದ ತಲುಪಿದ್ದೆ. ಬೆಲೆ ಬೆಳೆಸಿದ ಖರ್ಚಿಗಿಂತ ಹೆಚ್ಚು...
ಬದಲಾಗಬೇಕಾಗಿದೆ? ಯಾರಿಗೋ ಹಿಂಸೆ ಮಾಡಿ ನಾವು ಸಂತಸ ಅನುಭವಿಸುವುದೇತಕ್ಕೆ?. ಕಾಡಲಾರಂಭಿಸಿತು. ಕ್ರೌರ್ಯ ಮನದೊಳಗೆ ಸುಳಿದಾಡಿ ಒಮ್ಮೆ ತಲ್ಲಣಿಸಿತುಜೀವ. ನಿಜ ಅಲ್ವಾ? ಪ್ರಾಣಿಗಳನ್ನು ಕೊಂದು ಹಿಂಸಿಸಿ ನಾವು ಸೇವಿಸುತ್ತಿರುವುದು ತಪ್ಪಲ್ಲವೇ ? ನಮ್ಮ ದೈನಂದಿನ ಬದುಕು ಮಾಂಸ...