ನನ್ನವಳು ಮುಳ್ಳು ಮುಂದೆ ಚಲಿಸಿಯಾಗಿದೆ .ಆ ಕ್ಷಣವ ನಿಲ್ಲಿಸಿ ಸಂಭ್ರಮಿಸೋಕ್ಕಾಗಲಿ, ಯಾತನೆ ಪಡೋಕ್ಕಾಗಲಿ ಸಮಯವೇ ಸಿಗಲಿಲ್ಲವೇನೋ ಅನಿಸುತ್ತಿದೆ. ಸಾವಿರ ಕೈಗಳಿಂದ ಅಕ್ಷತೆಗಳು ತಲೆ ಮೇಲೆ ಬಿದ್ದಾಗ ನಾನು ತಾಳಿಕಟ್ಟಿದ ಹುಡುಗಿ ಪಕ್ಕದಲ್ಲಿ ಇದ್ದಳು. ಅವಳ ನಾಚಿದ...
ಉತ್ತರ ಸಿಗದ ಪ್ರಶ್ನೆ ಅವನೊಳಗೆ ಮೌನ ಗಲಾಟೆ ನಡೆಸುತ್ತಿತ್ತು. ಮೌನವವಾದ್ರಿಂದ ಕಾರಣವೇ ತಿಳಿಯುತ್ತಿಲ್ಲ. ಪರಿಣಾಮ ಮಾತ್ರ ತುಂಬಾ ತೀವ್ರತರವಾಗುತ್ತಿತ್ತು. ಋತುಚಕ್ರವು ತಿರುಗಿದಂತೆ ಅವನ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳು ಘಟಿಸಿ ಭಯವು ಮೃದು ಹೆಜ್ಜೆಗಳನ್ನು ಬಲವಾಗಿ ಊರಲಾರಂಭಿಸಿತು....
ರಮೇಶಣ್ಣ ಈ ದೊಡ್ಡ ಗಾಡಿಯ ಚಕ್ರ ತಿರುಗಿಸಿ ಹಾದಿಯ ಮೇಲೆ ಸುರಕ್ಷಿತವಾಗಿ ಸಾಗಿ ಗುರಿತಲುಪಲು ಸ್ಟೇರಿಂಗ್ ಹಿಡಿದು ಕೂತಿರುವವರು ನಮ್ಮ ರಮೇಶಣ್ಣ .50 ದಶಕಗಳ ಜೈತ್ರಯಾತ್ರೆ .ಬಸ್ಸಿನ ಸ್ಟೇರಿಂಗ್ ಹಿಡಿದು, ಗೇರು ಹಾಕುತ್ತಾ, ಕ್ಲಚ್ಚುಗಳನ್ನು ಒತ್ತುತ್ತ,...
ಅಭಿವೃದ್ಧಿ ಜರೂರತ್ತು ಏನು ಅಂತ ಗೊತ್ತಾಗಲಿಲ್ಲ. ರಸ್ತೆ ರಿಪೇರಿ ಸಾಗ್ತಾ ಇತ್ತು. ಹಾ ರಿಪೇರಿಯಲ್ಲ ಪೂರ್ತಿಯಾಗಿ ಹೊಸದಾಗಿ ತಯಾರಾಗುತ್ತಿತ್ತು. ಸಂಜೆಯಾಗುವಾಗ ಅಲ್ಲಿನ ಕರೆಂಟ್ ಕಂಬಗಳು ಶಾಸಕರಿಗೆ ಸ್ವಾಗತ ಎನ್ನೋ ಬ್ಯಾನರ್ ಅನ್ನು ಹೊತ್ತಿದ್ದವು. ಶಾಸಕರು ಮಾಯವಾದ...
ಶಿಕ್ಷಣ – ಸಂಸ್ಕಾರ ವ್ಯರ್ಥವಾಗಿ ಎಸೆದಿದ್ದನ್ನು ಆಯೋನು ಅವನು. ಆ ದಿನ ಭಯಗೊಂಡು ರಸ್ತೆ ಬದಿ ರಾಶಿಯಾಗಿದ್ದು ಮಣ್ಣನ್ನು ಹರಡುತ್ತಿದ್ದಾನೆ, ಕೈ ಹಾಕಿ ಒಳಗೇನಿದೆ ಅಂತ ನೋಡುತ್ತಿದ್ದಾನೆ. ನೋಡುವಾಗ ಬುದ್ಧಿ ಭ್ರಮಣೆಯಾಗಿದೆ ಎಂದೆನಿಸುತ್ತಿದೆ. ಆದರೆ ಮಣ್ಣು...
ವಿದಾಯ ಮನೆಯವರು ನಡೆಯಬೇಕಿತ್ತು ಮಸಣದೆಡೆಗೆ. ಜವಾಬ್ದಾರಿಗೆ ಹೆಗಲು ಕೊಟ್ಟು, ಹೊಟ್ಟೆಗೆ ಅನ್ನ ನೀಡಲು ದುಡಿಯುತಿದ್ದ ಅಪ್ಪ ಉಸಿರ ನಿಲ್ಲಿಸಿದ್ದ. ಹೊರಗಿನ ಕೋಣೆಯಲ್ಲಿ ನಿಶ್ಚಲವಾಗಿತ್ತು ದೇಹ. ದಿನವೂ ಮಲಗುವ ಜಾಗದಲ್ಲೇ.ಮನೆಯಲ್ಲಿ ಅಳುವಿನ ಸ್ವರ ಏರುಗತಿಯಲ್ಲಿತ್ತು, ಸೇರಿದ್ದ ಜನರ...
ಕಾಲದ ಕತೆ ಮತ್ತೆ ಬಸ್ ಏರಬೇಕು. ಗಾಲಿ ತಿರುಗುತ್ತಾ ಊರ ಗಡಿ ದಾಟಬೇಕು. ಬದುಕಿನ ನಾವೇ ಉತ್ತರದ ಕಡೆಗೆ ಸೆಳೆದಿರುವಾಗ, ಹೋಗದಿರುವುದು ಹೇಗೆ?. ಬ್ಯಾಗು ಹೆಗಲಿಗೇರಿಸಿದ್ದೇನೆ ಹೃದಯದೊಳಗೆ ಅವ್ಯಕ್ತ ಭಾವನೆಯೊಂದು ಹನಿಗೂಡಿದೆ. ವಿದಾಯದ ಇಳಿಸಂಜೆ ಭಾರವಾಗಿದೆ....
ಎಷ್ಟು ಸಮಂಜಸ ಈ ಮುಳ್ಳು ಸಂತಸವನ್ನು ನೀಡುತ್ತದೆ, ನೋವನ್ನು ನೀಡುತ್ತಿದೆ. ಇಲ್ಲಿ ಬದುಕು ಕ್ಷಣದ ಲೆಕ್ಕದಲ್ಲಿ ಬಿಕರಿಯಾಗುತ್ತದೆ. ನಿಂತರೆ ಕಲ್ಲಾಗುವ ಕಾರಣ ಚಲಿಸುತ್ತಲೇ ಇರಬೇಕಾಗಿದೆ, ಹೀಗೆ ಪಾದ ಸವಿಸಿ ನಿಲ್ದಾಣವೊಂದರಲ್ಲಿ ಸದ್ಯಕ್ಕೆ ನಿಂತಿದ್ದಾನೆ ಭಾರ್ಗವ. ಅವನು...
ಉರುಳಿದ ಮರ ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಬೇರನ್ನರಳಿಸಲು ಶಕ್ತಿ ತುಂಬಿದರು ,ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನೊಳಗಿನ ಜೀವರಾಶಿಗಳಿಗೆ ಕ್ಷಮೆಯಾಚಿಸುತ್ತಾ ಉರುಳುತ್ತಿದ್ದೇನೆ. ಎನ್ನುತ್ತಾ ಆ ಮರ ಧರೆಗುರುಳಿತು ಮರದ ಯಾತನೆ ಭೂಮಿಗರಿವಾದ್ದರಿಂದ ತನ್ನ ಕಂಪನವನ್ನು ತಡೆದು ಮಡಿಲನ್ನ ನೀಡಿತು....
ಬಣ್ಣ ಅಲ್ಲಿ ಬಣ್ಣಗಳು ಮಾತನಾಡುತ್ತವೆ. ಅಲ್ಲಿಗೆ ಬಂದವರು ಮೌನದ ಕಾಲ್ನಡಿಗೆ ನಡೆಸುತ್ತಾರೆ. ನಮ್ಮೊಳಗಿನ ಯೋಚನೆಗೊಂದು ಕೆಲಸ ಕೊಡಿಸಬೇಕಾದರೆ ಇದರೊಳಗೆ ಕಾಲಿಡಲೇಬೇಕು. ಆ ಮೂಲೆಯಲ್ಲಿ ನೆರಳಿನ ನಡುವೆ ಕುಳಿತಿದ್ದಾನೆ ಅವನು. ಆತನ ಕಣ್ಣೊಳಗೆ ಬಣ್ಣಗಳು ಪ್ರತಿಫಲಿಸಿ ಹೊಮ್ಮುತ್ತಿವೆ....