ನಿರಾಕಾರ ಅವರ್ಯಾಕೆ ಬೆಟ್ಟವೇರಿ ನೆಲೆಯಾದರೂ?, ದುರ್ಗಮ ಕಾಡಿನ ಮಧ್ಯೆ ಸ್ಥಾಪಿತರಾದರೋ?, ಕಲ್ಲುಗಳನ್ನು ತುಳಿದು ಸಾಗಿದ ಮೇಲೆ ಮೂಲೆಯೊಂದರಲ್ಲಿ ಪ್ರತಿಷ್ಠಾಪನೆಯಾದರೂ? ಗೊತ್ತಿಲ್ಲ. ಅವರನ್ನು ತಲುಪಲು ಕಷ್ಟಪಡಲೇಬೇಕು ಅನ್ನೋದಕ್ಕೇನೋ. ಮತ್ತೆ ಸುಲಭದಲ್ಲಿ ದಕ್ಕಿದರೆ ನಮಗೆ ಮೌಲ್ಯವೇ ತಿಳಿಯುವುದಿಲ್ಲ. ಜನ...
ಚಾಲಕ ಕಾಡನ್ನು ಭಾಗ ಮಾಡಿಕೊಂಡು ಸಾಗಿದ ರಸ್ತೆಯ ಮೇಲೆ ಬಸ್ಸು ಓಡುತ್ತಿತ್ತು. ಎತ್ತರದಿಂದ ನೋಡಿದರೆ ಹಸಿರು ಬಣ್ಣದ ನಡುವೆ ಬಿಳಿಬಣ್ಣವೊಂದು ಓಡಾಡಿದಂತೆ ಭಾಸವಾಗುತ್ತಿತ್ತು. ನಾನೀಗ ಹೇಳು ಘಟನೆ ಆ ಬಸ್ಸಿನ ಚಾಲಕನದು. ಅತ್ಯುತ್ಸಾಹಿ ಜೀವನ ಪಯಣಿಗ...
SOMEಗೀತ ಜನ ಮಲಗಿದ್ದರೂ ಊರು ಮಲಗಿರಲಿಲ್ಲ. ಅಲ್ಲಲ್ಲಿ ಬೆಳಕಿತ್ತು, ಕೆಲವೊಂದು ಚಕ್ರಗಳು ರಸ್ತೆ ಮೇಲೆ ಚಲಿಸುತ್ತಿದ್ದವು ,ನಾಯಿಗಳ ಸವಾರಿ ಆರಂಭವಾಗಿತ್ತು. ಅದೇನು ತಿರುವಿನಿಂದ ಕೂಡಿದ ಜಾಗವಲ್ಲ !.ಹೊಂಡ ಗುಂಡಿಯಿಲ್ಲ. ಅಲ್ಲಿ ಆತ ಗಾಡಿಯಿಂದ ಕೆಳಕ್ಕೆ ಬಿದ್ದ....
ಆಸೆ ಎಲ್ಲರ ಚಪ್ಪಾಳೆಗಳು ನಿಂತರೂ ಆತ ನಿಲ್ಲಿಸಿಲ್ಲ. ಮೊಗದಲ್ಲೊಂದು ಸಂಭ್ರಮವಿದೆ, ಮಗಳನ್ನ ವೇದಿಕೆಯಲ್ಲಿ ಕಂಡಾಗ ಕಡೆಯ ಸಾಲಲ್ಲಿ ಕೂತು ಆನಂದಿಸುವ ಖುಷಿಯಿದೆ. ಮಧ್ಯಮವರ್ಗದ ಮನೆ ಇದಕ್ಕಿಂತ ಚೆನ್ನಾಗಿ ಮನೆಯ ಪರಿಸ್ಥಿತಿ ವಿವರಿಸುವುದು ಹೇಗೆ?. “ಕಾಲಿಗೆ ಎಳೆದರೆ...
ಘಟನೆ ಘಟನೆಯೊಂದು ಘಟಿಸಿತು. ಊಹಿಸದೇ ಇದ್ದದ್ದು .ಕೆಲದಿನಗಳ ಹಿಂದೆ ಊರು ಮೌನವಾಗಿತ್ತು .ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗುಸುಪಿಸು ಮಾತುಗಳಿಂದ ಬೆಳೆದು ಜೈಕಾರ ,ಕಿರುಚಾಟ ,ಜಗಳಗಳ ತಲುಪಿತು. ಅವರಿಗೆ ಮೌನಕ್ಕಿಂತ ಮಾತೇ ಮುಖ್ಯವಾಗಿತ್ತು. ಆ ದಿನ ವಿಜಯಗಳ ಘೋಷಣೆ....
ವಿಪರ್ಯಾಸ ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು...
ಭ್ರಮಾಲೋಕ ಗೋಡೆಯ ಮೂಲೆಯಲ್ಲಿ ನಿಂತಿರುವ ಟೀವಿಯೊಳಗಿನ ದೃಶ್ಯವೊಂದು ಆ ಮನೆಯ ಹೆತ್ತವರಲ್ಲಿ ಆಸೆ ಹುಟ್ಟಿಸಿದೆ. ಪ್ರತಿಭಾ ಪ್ರದರ್ಶನದ ವೇದಿಕೆ, ಅದ್ಭುತ ಬೆಳಕಿನ ವಿನ್ಯಾಸ, ಯಾವುದು ಮಗುವಿನ ತುಂಟಾಟ ,ತೊದಲು ನುಡಿ ,ಕುಣಿತದ ನಾಜೂಕು ,ರಾಗದ ಆಲಾಪ,...
ಅವಳಿಗೆ ಅವನು ಅವಳಿಗೋ ಅವನೇ ಆಸರೆ. ಹೆಜ್ಜೆ ಇಡುವುದರಿಂದ ಹಿಡಿದು ಜಗತ್ತು ಕಾಣುವವರೆಗೆ. ದೃತರಾಷ್ಟ್ರನಿಗೆ ಸಂಜಯನಂತೆ .ಸೂರ್ಯ ಕಣ್ಣುಬಿಟ್ಟ ಗಳಿಗೆ ಜಗತ್ತೆಲ್ಲ ಬಣ್ಣಗಳ ಒಳಗೆ ಮಿಂದೆದ್ದರು ಅವಳಿಗೆ ಕಪ್ಪೊಂದೇ ಕಾಣುವ ಬೆಳಕು . ಒಂದಿನಿತೂ ಬೇಸರವಿಲ್ಲ....
ಚಂದದ ಹುಡುಗಿ ಪಾದಗಳು ಚಪ್ಪಲಿ ಧರಿಸಿ ಮಾರ್ಗ ಬದಿ ಚಲಿಸುತ್ತಿದ್ದವು. ದಾರಿಯಲ್ಲಿ ಸಾಗುತ್ತಿದ್ದ ಹಲವು ಜೋಡಿ ಚಪ್ಪಲಿಗಳೆಲ್ಲವೂ ಅವಸರವಾಗಿದ್ದವು. ಅಲ್ಲೊಂದು ಬೆಳಕು ಬೀರಲೆಂದೇ ನಿಲ್ಲಿಸಿರುವ ವಿದ್ಯುತ್ ಕಂಬದ ಕೆಳಗೆ ಅವಳು ಕುಳಿತಿದ್ದಾಳೆ .ಅದು ಬೆಳಕು ಬೀರುವ...