Connect with us

LATEST NEWS

ಮುಸ್ಲಿಂ ಡೆಲಿವರಿ ಬಾಯ್‌ ಬೇಡವೆಂದ ಸ್ವಿಗ್ಗಿ ಗ್ರಾಹಕ: ನೆಟ್ಟಿಗರಿಂದ ಆಕ್ರೋಶ

ಹೈದರಾಬಾದ್, ಸೆಪ್ಟಂಬರ್ 01: ʻಮುಸ್ಲಿಂ ಡೆಲಿವರಿ ಬಾಯ್ ತನ್ನ ಆರ್ಡರ್ ಅನ್ನು ಡೆಲಿವರಿ ಮಾಡಬಾರದುʼ ಎಂದು ಗ್ರಾಹಕರೊಬ್ಬರು ಸ್ವಿಗ್ಗಿಯಲ್ಲಿ ಮತಾಂಧ ವಿನಂತಿ ಮಾಡಿದ್ದು, ಇದೀಗ ಗ್ರಾಹಕನ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಹೈದರಾಬಾದ್ ಮೂಲದ ಸ್ವಿಗ್ಗಿ ಗ್ರಾಹಕರು ಇತ್ತೀಚೆಗೆ ಸ್ವಿಗ್ಗಿ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದಾರೆ ಮತ್ತು ಅವರ ಆಹಾರವನ್ನು ಮುಸ್ಲಿಂ ಡೆಲಿವರಿ ಬಾಯ್ ಡೆಲಿವರಿ ಮಾಡಬಾರದು ಎಂದು ಡೆಲಿವರಿ ಸೂಚನಾ ಪೆಟ್ಟಿಗೆಯಲ್ಲಿ ನಮೂದಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ತೆಲಂಗಾಣ ರಾಜ್ಯ ಟ್ಯಾಕ್ಸಿ ಮತ್ತು ಡ್ರೈವರ್ಸ್ ಜೆಎಸಿ ಅಧ್ಯಕ್ಷ ಶೇಕ್ ಸಲಾವುದ್ದೀನ್ ಅವರು ಗ್ರಾಹಕರು ಉಲ್ಲೇಖಿಸಿರುವ ಸೂಚನೆಯ ಸ್ಕ್ರೀನ್‌ಶಾಟ್‌ಅನ್ನು ಹಂಚಿಕೊಂಡಿದ್ದು, ಈ ಬಗ್ಗೆ ನೀವು ನಿಲುವು ತೆಗೆದುಕೊಳ್ಳಿ ಎಂದು ಸ್ವಿಗ್ಗಿಗೆ ಒತ್ತಾಯಿಸಿದ್ದಾರೆ.

‘ಪ್ರಿಯ ಸ್ವಿಗ್ಗಿ, ದಯವಿಟ್ಟು ಇಂತಹ ಧರ್ಮಾಂಧ ವಿನಂತಿಯ ವಿರುದ್ಧ ನಿಲುವು ತೆಗೆದುಕೊಳ್ಳಿ. ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲಾ ಧರ್ಮದವರಿಗೂ ಆಹಾರ ತಲುಪಿಸಲು ಇಲ್ಲಿದ್ದೇವೆ. ಮಜಬ್ ನಹೀ ಸಿಖಾತಾ ಆಪಾಸ್ ಮೇ ಬೈರ್ ರಖ್ನಾ ಎಂದು ಸಲಾವುದ್ದೀನ್ ಟ್ವೀಟ್ ಮಾಡಿದ್ದಾರೆ. ಈ ವಿವಾದಕ್ಕೆ ಸ್ವಿಗ್ಗಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟ್ವಿಟ್ಟರ್ ಬಳಕೆದಾರರು ವಿಲಕ್ಷಣವಾದ ಬೇಡಿಕೆಯಿಂದ ಕೋಪಗೊಂಡಿದ್ದಾರೆ. ಅಂತಹ ಗ್ರಾಹಕರನ್ನು ನಿಷೇಧಿಸಬೇಕೆಂದು ಸಲಹೆ ನೀಡಿದರು. ಕರ್ನಾಟಕದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲಸಗಾರರು ಧರ್ಮದ ಹೆಸರಿನಲ್ಲಿ ಇಂತಹ ಕಟುವಾದ ಮತಾಂಧತೆಯನ್ನು ಎದುರಿಸುತ್ತಿರುವುದನ್ನು ಪ್ಲಾಟ್‌ಫಾರ್ಮ್ ಕಂಪನಿಗಳು ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಅಂತಹ ಕಂಪನಿಗಳು ಯಾವ ಕ್ರಮವನ್ನು ತೆಗೆದುಕೊಳ್ಳುತ್ತವೆ? ಎಂದು ಸ್ವಿಗಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *