LATEST NEWS
ಹಾವಿನ ಹುತ್ತಕ್ಕೆ ಕೈ ಹಾಕುವ ದುಸ್ಸಾಹಸ ಬೇಡ – ಪಲಿಮಾರು ಸ್ವಾಮಿಜಿ

ಹಾವಿನ ಹುತ್ತಕ್ಕೆ ಕೈ ಹಾಕುವ ದುಸ್ಸಾಹಸ ಬೇಡ – ಪಲಿಮಾರು ಸ್ವಾಮಿಜಿ
ಉಡುಪಿ ಫೆಬ್ರವರಿ 8: ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ತರಲು ಹೊರಟ ರಾಜ್ಯ ಸರಕಾರದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಉಡುಪಿಯ ಪಲಿಮಾರು ಪರ್ಯಾಯ ಪೀಠಾಧಿಪತಿ ವಿಧ್ಯಾದೀಶ ತೀರ್ಥ ಸ್ವಾಮಿಜಿ ರಾಜ್ಯ ಸರಕಾರದ ಈ ನಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ಸ್ವಾಮಿಜಿ ಹುತ್ತವನ್ನು ಪೂಜಿಸಬೇಕು ಹೊರತು ಕೈ ಹಾಕಬಾರದು ಎಂದು ಹೇಳಿದರು. ದೇವಸ್ಥಾನಗಳ ಮೇಲೆ ಕೈ ಹಾಕುವುದು ರಾಮಾಯಣದಲ್ಲಿ ರಾವಣ ಸೀತೆಯನ್ನು ಮುಟ್ಟಿದಂತೆ ಆಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮಠ ಮಂದಿರಗಳಿಗೆ ಕೈ ಹಾಕುವುದು ಬೆಂಕಿಗೆ ಕೈ ಹಾಕಿದಂತೆ, ಬೆಂಕಿಗೆ ಪ್ರವೇಶ ಮಾಡುವುದು ದುರಂತದ ಚಿಂತನೆಯಾಗಿದೆ ಎಂದು ಹೇಳಿದರು.ರಾಜ್ಯ ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸವಿದೆ, ರಾಜ್ಯ ಸರಕಾರ ಮೊದಲು ಸರ್ಕಾರಿ ಶಾಲೆ, ಆಸ್ಪತ್ರೆಯನ್ನು ಚೆನ್ನಾಗಿ ನಡೆಸಲಿ ಎಂದು ಹೇಳಿದರು.
ಚರ್ಚ್, ಮಸೀದಿಗಳಿಗೆ ಕೈಹಾಕದ ಸರ್ಕಾರ ಹಿಂದೂ ಕೇಂದ್ರಗಳನ್ನೇ ಯಾಕೆ ಗುರಿ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದರು. ಇಂದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಸವರುವ ಕೆಲಸವಾಗಿದೆ ಎಂದು ಪರ್ಯಾಯ ಪೀಠಾಧಿಪತಿ ವಿಧ್ಯಾದೀಶ ತೀರ್ಥ ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದರು.