Connect with us

KARNATAKA

ಆನಂದ್ ಮಹೀಂದ್ರಾ ರಿಂದ ‘ಟೀಂ ಇಂಡಿಯಾ’ ಆಟಗಾರರಿಗೆ ಎಸ್​ಯುವಿ ಕಾರ್ ಗಿಫ್ಟ್..!​

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ ಆಯ್ದ ಆಟಗಾರರಿಗೆ ಮಹೀಂದ್ರಾ & ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್​ ಮಹೀಂದ್ರಾ ಎಸ್​ಯುವಿ ಕಾರುಗಳನ್ನ ಉಡುಗೊರೆಯಾಗಿ ನೀಡೋದಾಗಿ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

ಟೆಸ್ಟ್​ ಸೀರಿಸ್​ಗೆ ಮೊದಲ ಬಾರಿ ಪಾದರ್ಪಣೆ ಮಾಡಿದ ಮೊಹಮ್ಮದ್​ ಸಿರಾಜ್​, ಶುಭಮನ್​ ಗಿಲ್​, ವಾಷಿಂಗ್ಟನ್​ ಸುಂದರ್​​, ಟಿ. ನಟರಾಜನ್​​, ನವದೀಪ್​ ಸೈನಿ ಹಾಗೂ ಶಾರ್ದೂಲ್​ ಠಾಕೂರ್​ಗೆ ಈ ವಿಶೇಷ ಉಡುಗೊರೆ ಸಿಗಲಿದೆ.

ಅಂದ ಹಾಗೆ ಆನಂದ್​ ಮಹೀಂದ್ರಾ ಈ ಉಡುಗೊರೆಯನ್ನ ಕಂಪನಿ ಹಣದಿಂದ ನೀಡುತ್ತಿಲ್ಲ. ಬದಲಾಗಿ ತಮ್ಮ ಸ್ವಂತ ಹಣದಿಂದ ಈ ಉಡುಗೊರೆಗಳನ್ನ ಆಟಗಾರರಿಗೆ ನೀಡುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಡೆದ ಬಾರ್ಡರ್​ ಗವಾಸ್ಕರ್​​ ಟ್ರೋಫಿ ಸರಣಿಯನ್ನ 2-1 ಅಂತರದಲ್ಲಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾವನ್ನ ಬಗ್ಗು ಬಡಿದಿದೆ. ಮಾತ್ರವಲ್ಲದೇ ಕಳೆದ 32 ವರ್ಷಗಳಿಂದ ಗಬ್ಬಾ ಕ್ರೀಡಾಂಗಣದಲ್ಲಿ ಕೇವಲ ಗೆಲುವಿನ ರುಚಿಯನ್ನಷ್ಟೇ ಕಾಣುತ್ತಾ ಬಂದಿದ್ದ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.