DAKSHINA KANNADA
100 ವರ್ಷಗಳ ಇತಿಹಾಸವಿರುವ ಮಂಗಳೂರು ರಥಬೀದಿಯ ವೆಂಕಟರಮಣ ದೇವಸ್ಥಾನದ ಎದುರಿನ ಬೃಹತ್ ಅಶ್ವಥ ಮರ ಧರೆಗೆ!
ಮಂಗಳೂರು ಜನವರಿ24: ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಸ್ಥಾನದ ಎದುರಿನ ಬೃಹತ್ ಅಶ್ವಥ ಮರ ಉರುಳಿ ಬಿದ್ದಿದೆ.
ಇಂದು ನಸುಕಿನ ಜಾವಾ ಈ ಘಟನೆ ನಡೆದಿದ್ದು , ಮರ ಉರುಳಿ ಬಿದ್ದ ಪರಿಣಾಮ ಒಂದು ನೀರು ಸರಬರಾಜು ಮಾಡುವ ಟ್ಯಾಂಕರ್, ಜೆಸಿಬಿ ಮತ್ತು ಒಂದು ಕಾರಿಗೆ ಹಾನಿಯಾಗಿದೆ. ಆದರೆ ಅಧೃಷ್ಟವಶತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಈ ಮರ ಸುಮಾರು 100 ಅಧಿಕ ವರ್ಷಗಳ ಇತಿಹಾಸ ವಿದೆ ಎಂದು ಹೇಳಲಾಗಿದ್ದು ಮರದ ಬುಡ ದುರ್ಬಲಗೊಂಡು ಈ ಮರ ಉರುಳಿಬಿದ್ದಿದೆ ಎಂದು ಹೇಳಲಾಗಿದೆ. ಮಂಗಳೂರು ಪಾಲಿಕೆ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ದೇವಾಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ,.
You must be logged in to post a comment Login