LATEST NEWS
ಮಂಗಳೂರಿನಲ್ಲಿ ನಿಫಾಹ್ ವೈರಸ್ ಸಂಶಯ ಇಬ್ಬರು ರೋಗಿಗಳ ರಕ್ತದ ಪರೀಕ್ಷೆ

ಮಂಗಳೂರಿನಲ್ಲಿ ನಿಫಾಹ್ ವೈರಸ್ ಸಂಶಯ ಇಬ್ಬರು ರೋಗಿಗಳ ರಕ್ತದ ಪರೀಕ್ಷೆ
ಮಂಗಳೂರು ಮೇ 22: ಮಂಗಳೂರಿನಲ್ಲಿ ನಿಫಾಹ್ ವೈರಸ್ ಸಂಶಯದ ಮೇಲೆ ಎರಡು ರೋಗಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ ರಾಮಕೃಷ್ಣ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೇರಳದಲ್ಲಿ ಹರಡುತ್ತಿರುವ ಮಾರಣಾಂತಿಕ ಸೋಂಕಿನ ನಿಪಾಹ್ ವೈರಸ್ ಬಗ್ಗೆ ಜನರು ಜಾಗೃತರಾಗಬೇಕಾಗಿದ್ದು, ಯಾವುದೇ ಹಣ್ಣು ಹಂಪಲು ಮತ್ತು ಬಾವಿ ನೀರಿನ ಬಳಿ ಬಾವಲಿಗಳು ಕಚ್ಚಿರುವಂತಹ ವಸ್ತುಗಳನ್ನು ಸೇವಿಸದೇ ಇರುವುದು ಉತ್ತಮ ಎಂದು ಅವರು ತಿಳಿಸಿದರು.

ಮಂಗಳೂರಿನಲ್ಲಿ ಈವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದ ಅವರು ಇನ್ನೂ ಹೊರ ರಾಜ್ಯದಿಂದ ಈ ವೈರಸ್ ತಗುಲಿದ ರೋಗಿ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಬಂದರೆ ಅವರನ್ನು ಜಾಗರೂಕತೆಯಿಂದ ನೋಡಿಕೊಳ್ಳಲು ಮನವಿ ಮಾಡಿದರು.
ಈ ನಡುವೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಈ ರೋಗವಿರುವ ಸಂಶಯದ ಮೇಲೆ ಎರಡು ರೋಗಿಗಳ ಸ್ಯಾಂಪಲ್ ಟೆಸ್ಟ್ ಗೆ ಮಣಿಪಾಲ ರಿಸರ್ಚ್ ಸೆಂಟರ್ ಗೆ ಈ ಸ್ಯಾಂಪಲ್ ನೀಡಲಾಗಿದೆ ಎಂದರು. ರೋಗದ ಬಗ್ಗೆ ಇನ್ನೂ ಯಾವುದೇ ಮಾಹಿತಿಗಳು ಖಚಿತವಾಗಿಲ್ಲ ಎಂದು ತಿಳಿಸಿದರು.