LATEST NEWS
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ ಐಎ ಗೆ ನೀಡಲು ಆಗ್ರಹಿಸಿ ಮೇ 25 ರಂದು ಜನಾಗ್ರಹ ಸಭೆ

ಮಂಗಳೂರು ಮೇ 22: ಹಿಂದೂ ಕಾರ್ಯಕರ್ತರ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ ಐಎ ಗೆ ನೀಡಲು ಆಗ್ರಹಿಸಿ ಮೇ 25 ರಂದು ಬಜಪೆಯಲ್ಲಿ ಜನಾಗ್ರಹ ಸಭೆ ನಡೆಸಲು ವಿಶ್ವ ಹಿಂದೂ ಪರಿಷತ್ ಭಜರಂಗದಳ ತಿಳಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಎಚ್ ಪಿ ಮುಖಂಡ ಪುರುಷೋತ್ತಮ್ ಜೋಗಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐಎ ಗೆ ವಹಿಸಲು ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಶ್ರದಾಂಜಲಿ ಸಭೆ ಬಜ್ಪೆಯಲ್ಲಿ ನಡೆಯಲಿದೆ ಎಂದು. ಮೇ 25 ರಂದು ಬಜ್ಪೆಯ ಶಾರದಾ ಮಂಟಪದಲ್ಲಿ ನಡೆಯಲಿದ್ದು, ಪೊಲೀಸ್ ಇಲಾಖೆಗೆ ಈ ಕುರಿತಂತೆ ಪರ್ಮಿಶನ್ ಗಾಗಿ ಪತ್ರ ನೀಡಲಾಗಿದೆ ಎಂದರು.
