LATEST NEWS
ಸುರತ್ಕಲ್ ನಲ್ಲಿ ಇಂದಿರಾ ಗಾಂಧಿ ಭಾವ ಚಿತ್ರಕ್ಕೆ ಮಸಿ

ಸುರತ್ಕಲ್ ನಲ್ಲಿ ಇಂದಿರಾ ಗಾಂಧಿ ಭಾವ ಚಿತ್ರಕ್ಕೆ ಮಸಿ
ಮಂಗಳೂರು ಫೆಬ್ರವರಿ 3: ಸುರತ್ಕಲ್ ನಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯ ಸರಕಾರದ ಇಂದಿರಾ ಕ್ಯಾಂಟಿನ್ ಕಟ್ಟಡದಲ್ಲಿದ್ದ ಇಂದಿರಾ ಗಾಂಧಿ ಅವರ ಭಾವ ಚಿತ್ರಕ್ಕೆ ದುಷ್ಕರ್ಮಿಗಳು ಮಸಿ ಹಚ್ಚಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ಶಾಸಕ ಮೊಯಿದ್ದಿನ್ ಬಾವಾ ಅವರ ಮುತುವರ್ಜಿಯಲ್ಲಿ ನಿರ್ಮಾಣ ವಾಗುತ್ತಿರುವ ಇಂದಿರಾ ಕ್ಯಾಂಟಿನ್ ಇದಾಗಿದ್ದು, ನಿರ್ಮಾಣ ಹಂತದಲ್ಲಿರುವಾಗಲೇ ಇಂದಿರಾ ಕ್ಯಾಂಟಿನ್ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದಿದೆ.

ಇನ್ನು ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭಗೊಳ್ಳಲಿದ್ದು ಈ ಹಿನ್ನಲೆಯಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ, ಈ ನಡುವೆ ಕಿಡಿಗೇಡಿಗಳು ಕ್ಯಾಂಟಿನ್ ಕಟ್ಟಡದಲ್ಲಿದ್ದ ಇಂದಿರಾ ಭಾವಚಿತ್ರಕ್ಕೆ ಮಸಿ ಬಳಿದಿದ್ದು, ಸುರತ್ಕಲ್ ವ್ಯಾಪ್ತಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.