LATEST NEWS
ಕುಮಾರಿ ಭಾವನಾ ಇಂದಿನಿಂದ ಶ್ರೀಮತಿ ಭಾವನಾ

ಕುಮಾರಿ ಭಾವನಾ ಇಂದಿನಿಂದ ಶ್ರೀಮತಿ ಭಾವನಾ
ಮಂಗಳೂರು ಫೆಬ್ರವರಿ 3: ಇನ್ನು ಮುಂದೆ ನಾನು ಶ್ರೀಮತಿ ಭಾವನಾ ಎಂದು ಚಿತ್ರನಟಿ , ಕೆಪಿಸಿಸಿ ಕಾರ್ಯದರ್ಶಿ ಭಾವನಾ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನನ್ನು ಶ್ರೀಮತಿ ಎಂದು ಕರೆಯಬೇಕೋ ಅಥವಾ ಕುಮಾರಿ ಭಾವನಾ ಎಂದು ಕರೆಯಬೇಕೋ ಎಂಬ ಗೊಂದಲಕ್ಕೆ ಇವತ್ತಿನಿಂದಲೇ ತೆರೆಯೆಳೆಯಬೇಕು ಎಂದು ಹೇಳಿದ ಅವರು ಇನ್ನು ಮುಂದೆ ನನನ್ನು ಶ್ರೀಮತಿ ಭಾವನಾ ಎಂದೇ ಕರೆಯಬೇಕು ಎಂದರು.
ಶ್ರೀಮತಿ ಎಂದರೆ ಮತಿಯುಳ್ಳವಳು , ಪ್ರಭುದ್ಧತೆ ಹೊಂದಿದವಳು ಎಂದು ತಿಳಿಸಿದರು. ಇದರಿಂದ ನನ್ನ ವೃತ್ತಿ ಜೀವನಕ್ಕೆ ಹೊಡೆತ ಬೀಳಲಾರದು ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಚಿತ್ರದುರ್ಗದಿಂದ ಮುಂದಿನ ವಿಧಾನಸಭೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಕಾಂಗ್ರೇಸ್ ನ ಹಿರಿಯ ಮುಖಂಡರು ಟಿಕೇಟ್ ನೀಡುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.