LATEST NEWS
ಸುರತ್ಕಲ್ : ಭೀಕರ ಮಳೆ ಕಡಿದು ಹೋದ ಸಂಪರ್ಕ ರಸ್ತೆ ಸರಿಪಡಿಸಲು ಶಾಸಕ ಡಾ. ಭರತ್ ಶೆಟ್ಟಿ ಸೂಚನೆ

ಮಂಗಳೂರು : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪನಾ ಕಾಲೇಜು ಕಡೆಯಿಂದ ಸುಂಕದಕಟ್ಟೆ ಕಡೆಗೆ ಹೋಗುವ ಸಂಪರ್ಕ ರಸ್ತೆಯು ಭೀಕರ ಮಳೆಗೆ ಕಡಿದು ಹೋಗಿದೆ.
ಮಾಹಿತಿ ಪಡೆದ ಸ್ಥಳೀಯ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದರು. ಕೂಡಲೇ ಇದರ ಬಗ್ಗೆ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಮಾತಾನಾಡಿ, ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದರು.ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,ಗುರುಪುರ ಮಹಾ ಶಕ್ತಿಕೇಂದ್ರದ ಅಧ್ಯಕ್ಷರು, ಮಂಡಲದ ರೈತಾ ಮೋರ್ಛಾದ ಅಧ್ಯಕ್ಷರು,ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
