LATEST NEWS
ಎನ್ಐಟಿಕೆ ವಿಧ್ಯಾರ್ಥಿ ಆತ್ಮಹತ್ಯೆ – ಮುಂದುವರೆದ ಆತ್ಮಹತ್ಯಾ ಸರಣಿ ಕಣ್ಣುಚ್ಚಿ ಕುಳಿತ ಶಿಕ್ಷಣ ಇಲಾಖೆ
ಎನ್ಐಟಿಕೆ ವಿಧ್ಯಾರ್ಥಿ ಆತ್ಮಹತ್ಯೆ – ಮುಂದುವರೆದ ಆತ್ಮಹತ್ಯಾ ಸರಣಿ ಕಣ್ಣುಚ್ಚಿ ಕುಳಿತ ಶಿಕ್ಷಣ ಇಲಾಖೆ
ಮಂಗಳೂರು ನವೆಂಬರ್ 17: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಧ್ಯಾರ್ಥಿಗಳ ಆತ್ಮಹತ್ಯೆ ಸರಣಿಗೆ ಮತ್ತೊಂದು ಆತ್ಮಹತ್ಯೆ ಸೇರಿಕೊಂಡಿದೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿಧ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿರುವ ಎನ್ಐಟಿಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಬಿಟೆಕ್ ತೃತೀಯ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿ ಮುಂಬೈ ಮೂಲದ ಆನಂದ್ ಪಾಠಕ್ (21) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಹಾಜರಾತಿ ಕೊರತೆ ವಿಚಾರದಲ್ಲಿ ಶಿಕ್ಷಕರಿಂದ ಅಪಮಾನಕ್ಕೂಳಗಾದ ಕಾರಣ ಆನಂದ್ ಪಾಠಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಸೋಮವಾರದ ಪರೀಕ್ಷೆಗೆ ಅವಕಾಶ ನೀಡದ ಕಾರಣಕ್ಕೆ ಆನಂತ ಪಾಠಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅರೋಪಿಸಲಾಗಿದೆ.
ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಕಾರಣ ಕಾಲೇಜು ಆವರಣದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ಕುರಿತುಮಂಗಳೂರಿನ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಜಿಲ್ಲೆಯಲ್ಲಿ ಸರಣಿ ವಿಧ್ಯಾರ್ಥಿಗಳ ಆತ್ಮಹತ್ಯೆ ನಡೆಯುತ್ತಿದ್ದರು,ಜಿಲ್ಲಾಡಳಿತವಾಗಲೀ,ಶಿಕ್ಷಣ ಇಲಾಖೆ ಯಾವುದೇ ರೀತಿಯ ಮುಂಜಾಗೃತಾ ಕ್ರಮಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಧ್ಯಾರ್ಥಿಗಳ ಆತ್ಮಹತ್ಯೆ ಸರಣಿ ಆತಂಕ ಮೂಡಿಸಿದೆ.