ಕೇರಳ ಸರಕಾರ ಶಬರಿಮಲೆ ಆಚರಣೆಯನ್ನು ಹಂತ ಹಂತವಾಗಿ ಮುರಿಯುತ್ತಿದೆ – ಗಿರೀಶ್

ಉಡುಪಿ ನವೆಂಬರ್ 17: ಶಬರಿಮಲೆ ಆವರಣದವರೆಗೂ ಪೊಲೀಸರು ಶೂ ಧರಿಸಿ ದೇಗುಲದ ಆವರಣ ಪ್ರವೇಶಿಸಿದ್ದು, ಶಬರಿಮಲೆಯಲ್ಲಿ ಒಂದೊಂದು ಹಂತವಾಗಿ ಆಚರಣೆಗಳನ್ನು ಮುರಿಯಲಾಗುತ್ತಿದೆ. ಈ ಮೂಲಕ ಕೋಟ್ಯಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಹೇಳಿದ್ದಾರೆ.

ಇದುವರೆಗೆ ಪೋಲೀಸರು ಶೂ ಧರಿಸಿ ದೇಗುಲದ ಆವರಣ ಪ್ರವೇಶಿಸಿಲ್ಲ. ಈಗ ಹದಿನೆಂಟು ಮೆಟ್ಟಿಲ ಬುಡದವರೆಗೆ ಶೂ ಧರಿಸುವಂತೆ ಆದೇಶ ಹೊರಡಿಸಿದೆ.

ರಾತ್ರಿ 11.30ರ ಬಳಿಕ ಯಾರೂ ದೇವಸ್ಥಾನದ ಆವರಣದಲ್ಲಿ ಉಳಿಯದಂತೆ ಆದೇಶಿಸಿದ್ದಾರೆ. ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ ಕೆಲ ತಿಂಗಳಿಂದ ಕಾಣಿಕೆ ಹುಂಡಿಗೆ ಹಣ ಬೀಳುತ್ತಿಲ್ಲ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಚೀಟಿ ಬರೆದು ಹಾಕುತ್ತಿದ್ದಾರೆ. ಇದರಿಂದ ರಾಜ್ಯ ಬೊಕ್ಕಸಕ್ಕೆ ತೊಂದರೆ ಆಗುತ್ತಿದ್ದು ಆನ್ ಲೈನ್ ಬುಕ್ಕಿಂಗ್ ಮಾಡುವಂತೆ ಸರಕಾರ ಒತ್ತಾಯಿಸುತ್ತಿದೆ.

ಈ ಮೂಲಕ ಕೋಟ್ಯಾಂತರ ಹಣ ಸಂಗ್ರಹಿಸಲು ರಾಜ್ಯ ಸರಕಾರ ಚಿಂತಿಸುತ್ತಿದೆ. ಭಕ್ತರು ರೈಲು ಮೂಲಕ ಶಬರಿಮಲೆಗೆ ಹೋಗಬೇಕು ಆನ್ ಲೈನ್ ಮೂಲಕ ಬುಕ್ ಮಾಡಬೇಡಿ ಅಂತಾ ಗಿರೀಶ್ ಹೇಳಿದ್ದಾರೆ.

2 Shares

Facebook Comments

comments