LATEST NEWS
ಭಾರತ್ ಬಂದ್ ಗೆ ಬೆಂಬಲ ನೀಡಲು ಮಾಜಿ ಸಚಿವ ರಮಾನಾಥ ರೈ ಕರೆ

ಭಾರತ್ ಬಂದ್ ಗೆ ಬೆಂಬಲ ನೀಡಲು ಮಾಜಿ ಸಚಿವ ರಮಾನಾಥ ರೈ ಕರೆ
ಮಂಗಳೂರು ಸೆಪ್ಟೆಂಬರ್ 8: ದೇಶದಲ್ಲಿ ಏರುತ್ತಿರುವ ತೈಲ ಬೆಲೆ ಏರಿಕೆಯಿಂದ ಬಡವರಿಗೆ ಕಷ್ಟವಾಗುತ್ತಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ಭಾರತ್ ಬಂದ್ ಕರೆ ನೀಡಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು , ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜನರು ಕಾಂಗ್ರೆಸ್ ಘೋಷಿಸಿದ ಬಂದ್‌ಗೆ ಬೆಂಬಲ ನೀಡಬೇಕು ಎಂದು ಅವರು ಕರೆ ನೀಡಿದರು.

ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ರಾಜ್ಯದ ಸೆಸ್ ಕಡಿಮೆ ಮಾಡಬೇಕೆನ್ನುವುದು ಸರಿಯಾದ ಉತ್ತರವಲ್ಲ, ದೇಶದಲ್ಲಿ ಬಿಜೆಪಿ ಸರಕಾರಗಳೂ ಬಹಳಷ್ಟಿದ್ದು, ಅಲ್ಲಿ ಯಾಕೆ ಸೆಸ್ ಕಡಿಮೆ ಮಾಡೋ ಬಗ್ಗೆ ಚಿಂತನೆ ನಡೆಸುತ್ತಿಲ್ಲ? ಎಂದು ಪ್ರಶ್ನಿಸಿದರು. ಶಾಲೆ-ಕಾಲೇಜುಗಳು ಸೇರಿ ಎಲ್ಲವನ್ನೂ ಬಂದ್ ಮಾಡಬೇಕೆಂದು ಕರೆಕೊಟ್ಟಿದ್ದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಂಸದ ನಳಿನ್ ಕೇರಳದಲ್ಲಿ ಪೆಟ್ರೋಲ್- ಡಿಸೆಲ್ ಬಗ್ಗೆ ಒಂದೊಂದು ರೀತಿ ನೀಡಿದ್ದು, ಅವರಿಗೆ ಕೋಚಿಂಗ್ ನೀಡಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.